Advertisement

ದುಪ್ಪಟ್ಟಾಗಿದೆ ನಾಲ್ಕು ವಿಮಾನ ಸಂಸ್ಥೆಗಳ ಬಾಕಿ ಮೊತ್ತ!

09:39 PM Dec 26, 2021 | Team Udayavani |

ನವದೆಹಲಿ: ಭಾರತದ ನಾಲ್ಕು ಪ್ರಮುಖ ವಿಮಾನಯಾನ ಸಂಸ್ಥೆಗಳು; ಭಾರತ ವಿಮಾನಯಾನ ಪ್ರಾಧಿಕಾರಕ್ಕೆ (ಎಎಐ) ಪಾವತಿ ಮಾಡಬೇಕಿರುವ ಬಾಕಿ ಮೊತ್ತ, 2020 ಜನವರಿಯಿಂದ 2021 ಅಕ್ಟೋಬರ್‌ ಅವಧಿಯಲ್ಲಿ ದುಪ್ಪಟ್ಟಾಗಿದೆ!

Advertisement

ಇಂಡಿಗೊ, ಸ್ಪೈಸ್‌ಜೆಟ್‌, ಗೋಫ‌ರ್ಸ್‌r, ಏರ್‌ಏಷ್ಯಾ ಇಂಡಿಯಾಗಳು ಇಂತಹ ಸ್ಥಿತಿಗೆ ತಲುಪಿರುವ ಸಂಸ್ಥೆಗಳು. ಆದರೆ ಗರಿಷ್ಠ ಮೊತ್ತ ಬಾಕಿಯುಳಿಸಿಕೊಂಡಿರುವುದು ಸರ್ಕಾರಿ ಸಂಸ್ಥೆಯಾದ ಏರ್‌ ಇಂಡಿಯಾ. ಅದು ಎಎಐಗೆ ನೀಡಬೇಕಾಗಿರುವ ಹಣ 2,362.36 ಕೋಟಿ ರೂ. ಸದ್ಯ ಏರ್‌ ಇಂಡಿಯಾವನ್ನು ಟಾಟಾ ಸಮೂಹ ಖರೀದಿಸಿದೆ. ಆದ್ದರಿಂದ ಈ ಮೊತ್ತಕ್ಕೆ ಎಎಐ ವಿನಾಯ್ತಿ ನೀಡುವುದು ಖಾತ್ರಿ.

ಉಳಿದ ಸಂಸ್ಥೆಗಳಿಗೆ ಈ ಅವಕಾಶ ಸಿಗುವುದಿಲ್ಲ. ಎಎಐ ಭಾರತದಲ್ಲಿ 100ಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಇಲ್ಲಿನ ಯಾವುದೇ ಸೌಲಭ್ಯ ಬಳಸಿಕೊಳ್ಳುವುದಕ್ಕೆ ಪ್ರತೀ ವಿಮಾನಯಾನ ಕಂಪನಿಗಳು ಹಣ ಪಾವತಿಸಬೇಕಾಗುತ್ತದೆ. ಆ ಹಣವೇ ಈಗ ಬಾಕಿಯಾಗಿರುವುದು.

Advertisement

Udayavani is now on Telegram. Click here to join our channel and stay updated with the latest news.

Next