Advertisement
ಈಗಾಗಲೇ ತನ್ನ ಟೈಟಲ್, ಟ್ರೇಲರ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವ ಸೈಂಟಿಫಿಕ್ ಫಿಕ್ಷನ್ ಥ್ರಿಲ್ಲರ್ ಶೈಲಿಯ “ತುರ್ತು ನಿರ್ಗಮನ’ ಈ ವಾರ ತೆರೆಗೆ ಬರುತ್ತಿದೆ. ಸುನೀಲ್ ರಾವ್ ನಾಯಕನಾಗಿ ಅಭಿನಯಿಸಿರುವ “ತುರ್ತು ನಿರ್ಗಮನ’ ಚಿತ್ರದಲ್ಲಿ ಸುಧಾರಾಣಿ, ರಾಜ್ ಬಿ ಶೆಟ್ಟಿ, ಅಚ್ಯುತ ಕುಮಾರ್, ಹಿತಾ ಚಂದ್ರಶೇಖರ್, ಸಂಯುಕ್ತಾ ಹೆಗ್ಡೆ, ಅಮೃತಾ ರಾಮಮೂರ್ತಿ, ಅರುಣಾ ಬಾಲರಾಜ್, ನಾಗೇಂದ್ರ ಶಾ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Related Articles
Advertisement
ಕಿರಣ್ ರಾಜ್ ನಾಯಕರಾಗಿರುವ “ಬಡ್ಡೀಸ್’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರವನ್ನು ಗುರುವೇಂದ್ರ ಶೆಟ್ಟಿ ನಿರ್ದೇಶಿಸಿದ್ದು, ಭಾರತಿ ಶೆಟ್ಟಿ ನಿರ್ಮಿಸಿದ್ದಾರೆ. “ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರೂ, ನನಗೆ ಸಾಕಷ್ಟು ಹೆಸರು ತಂದುಕೊಟ್ಟದ್ದು “ಕನ್ನಡತಿ’ ಧಾರಾವಾಹಿ ಪಾತ್ರ. ಆನಂತರ ಒಳ್ಳೆಯ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿದ್ದ ನನಗೆ ಗುರುತೇಜ್ ಶೆಟ್ಟಿ ಅವರು ಹೇಳಿದ್ದ ಕಥೆ ಹಿಡಿಸಿತು. ಹಿಂದೆ “ಮಾರ್ಚ್ 22′ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ ದ್ದೇನೆ. ಆದರೆ ನಾಯಕನಾಗಿ ಇದು ಮೊದಲ ಚಿತ್ರ. ಸ್ನೇಹದ ಮಹತ್ವ ಸಾರುವ ಈ ಚಿತ್ರದಲ್ಲಿ ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಇದೆ’ ಎನ್ನುವುದು ನಾಯಕ ಕಿರಣ್ ರಾಜ್ ಮಾತು. ನಾಯಕಿ ಸಿರಿ ಪ್ರಹ್ಲಾದ್, ನಟ ಗೋಪಾಲ್ ದೇಶಪಾಂಡೆ ಸೇರಿದಂತೆ ಅನೇಕರು ನಟಿಸಿದ್ದಾರೆ.
‘ತ್ರಿವಿಕ್ರಮ’ನ ಮೂಲಕ ವಿಕ್ಕಿ ಎಂಟಿ
ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ಇಂದು ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ. ಅವರ ನಟನೆಯ ಚೊಚ್ಚಲ ಚಿತ್ರ “ತ್ರಿವಿಕ್ರಮ’ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು, ಟೀಸರ್‌ಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಪಕ್ಕಾ ಯೂತ್‌ಫುಲ್ ಕಥೆಯನ್ನು ಹೊಂದಿರುವ “ತ್ರಿವಿಕ್ರಮ’ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ
ಈ ಹಿಂದೆ “ರೋಸ್’, “ಮಾಸ್ ಲೀಡರ್’ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಹನಾ ಮೂರ್ತಿ “ತ್ರಿವಿಕ್ರಮ’ನಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. “ಸೋಮಣ್ಣ ಟಾಕೀಸ್’ ಬ್ಯಾನರ್‌ನಲ್ಲಿ ರಾಮ್ಕೋ ಸೋಮಣ್ಣ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದ ವರು “ತ್ರಿವಿಕ್ರಮ’ನ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಹರಿಕಥೆಯಲ್ಲ, ಗಿರಿಕಥೆ: ಇದಲ್ಲದೇ ರಿಷಭ್ ಶೆಟ್ಟಿ ನಟನೆಯ “ಹರಿಕಥೆಯಲ್ಲ, ಗಿರಿಕಥೆ’ ಚಿತ್ರ ಗುರುವಾರ ಬಿಡುಗಡೆಯಾಗಿದೆ. ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್‌ನಡಿ ಸಂದೇಶ್ ನಿರ್ಮಿಸಿದ್ದಾರೆ