Advertisement
ಮಂಗಳೂರಿನಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜೂ. 15ರಿಂದ 18ರ ವರೆಗೆ “ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಉಡುಪಿ ಜಿಲ್ಲೆಯಲ್ಲಿ ಹಲವೆಡೆ ಸಾಧಾರಣ ಮಳೆಯಾಗಿದ್ದು, ಬೈಂದೂರು, ಕಾಪು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ತಡರಾತ್ರಿ, ಶುಕ್ರವಾರ ಬಿಟ್ಟುಬಿಟ್ಟು ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಶುಕ್ರವಾರ ಮುಂಜಾನೆ ಕೆಲಕಾಲ ಧಾರಾಕಾರ ಮಳೆ ಸುರಿದಿದೆ. ಅನಂತರ ಸಂಜೆವರೆಗೂ ಬಿಸಿಲು-ಮೋಡ ಕವಿದ ವಾತಾವರಣ ನಡುವೆ ಸಣ್ಣದಾಗಿ ಮಳೆಯಾಗಿದೆ. ಕಾರ್ಕಳ 7.5, ಕುಂದಾಪುರ 2.6, ಉಡುಪಿ 4.8, ಬೈಂದೂರು 12.6, ಬ್ರಹ್ಮಾವರ 2.4, ಕಾಪು 9.7, ಹೆಬ್ರಿ 2.7 ಮಿ. ಮೀ. ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 55.4 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯ ಸರಾಸರಿ ಮಳೆ 37.9 ಮಿ.ಮೀ. ಆಗಿದೆ. ಬೆಳ್ತಂಗಡಿ 36 ಮಿ.ಮೀ, ಬಂಟ್ವಾಳ 43 ಮಿ.ಮೀ, ಪುತ್ತೂರು 33 ಮಿ.ಮೀ, ಸುಳ್ಯ 32.1 ಮಿ.ಮೀ, ಮೂಡುಬಿದಿರೆ 41.4 ಮಿ.ಮೀ, ಕಡಬ 36.2 ಮಿ.ಮೀ, ಮೂಲ್ಕಿ 44.9 ಮಿ.ಮೀ. ಮಳೆ ವರದಿಯಾಗಿದೆ.