Advertisement

ಹಿಟ್‌ ಆ್ಯಂಡ್‌ ರನ್‌ : ಮಾರ್ನಿಂಗ್‌ ವಾಕ್‌ ನಿರತ ನಾಲ್ವರ ಸಾವು

03:26 PM Sep 16, 2017 | udayavani editorial |

ಔರಂಗಾಬಾದ್‌ : ಇಲ್ಲಿನ ಚಿಕಲ್‌ಥಾಣಾ ಪ್ರದೇಶದಲ್ಲಿ ಇಂದು ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ  ಶನಿವಾರ “ಮಾರ್ನಿಂಗ್‌ ವಾಕ್‌’ ನಿರತರಾಗಿದ್ದ ನಾಲ್ವರ ಮೇಲೆ ಅಪರಿಚಿತರ ವಾಹನವೊಂದು ಹರಿದು ಅವರ ದಾರುಣ ಸಾವಿಗೆ ಕಾರಣವಾದ ಘಟನೆ ವರದಿಯಾಗಿದೆ.

Advertisement

ಮೃತರನ್ನು ಭಗೀರಥ ಲಿಮಾಜಿ ಗಾವಳಿ (57), ದಗ್‌ದು ಬಾಲಾಜಿ ಧವಳೆ (66), ಅನಿಲ್‌ ಸೋನಾವಾನೆ (47) ಮತ್ತು ನಾರಾಯಣ ವಾಘಮಾರೆ (64) ಎಂದು ಗುರುತಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಎಲ್ಲ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಅವರ ಮೃತದೇಹಗಳನ್ನು ಅಟಾಪ್ಸಿಗಾಗಿ ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಈ ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ಶಾಮೀಲಾದ ವಾಹನವನ್ನು ಪತ್ತೆ ಹಚ್ಚು ಕಾರ್ಯ ನಡೆದಿದೆ ಎಂದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next