Advertisement

ಕಲಬುರಗಿ: ಓರ್ವ ಬಾಲಕ, ಇಬ್ಬರು ಬಾಲಕಿಯರು ಸೇರಿ ನಾಲ್ವರು ಸೋಂಕಿನಿಂದ ಗುಣಮುಖ

06:02 PM May 02, 2020 | keerthan |

ಕಲಬುರಗಿ: ಮಹಾಮಾರಿ ಕೋವಿಡ್-19 ಸೋಂಕಿತ ಓರ್ವ ಬಾಲಕ, ಇಬ್ಬರು ಬಾಲಕಿಯರು ಸೇರಿ ನಾಲ್ವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ನಗರದ ಸತ್ರಾಸವಾಡಿ ನಿವಾಸಿಗಳಾದ 10 ವರ್ಷದ ಬಾಲಕಿ (ಪಿ-254), ಐದು ವರ್ಷದ ಬಾಲಕ (ಪಿ-315) ಮತ್ತು 13 ವರ್ಷದ ಬಾಲಕಿ (ಪಿ-393) ಕೋವಿಡ್-19 ಸೋಂಕು‌ ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಮೂವರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ 55 ವರ್ಷದ ಬಟ್ಟೆ ವ್ಯಾಪಾರಿ (ಪಿ-205) ಯ ನೇರ ಸಂಪರ್ಕದಿಂದ ಸೋಂಕು ಹರಡಿತ್ತು.

ಮತ್ತೊಬ್ಬ 32 ವರ್ಷದ (ಪಿ-314) ಯುವಕ ಕೂಡ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವರು ಮಾ.24 ರಂದು ಬೆಂಗಳೂರಿನಿಂದ ಮರಳಿದ್ದರು.

ಬೆಂಗಳೂರಿನಿಂದ ಮರಳಿದ‌ ಕಾರಣ ಗಂಟಲು ಮಾದರಿ ಪರೀಕ್ಷೆ ಮಾಡಲಾಗಿತ್ತು.‌ ಆದರೆ, ವರದಿ ನೆಗೆಟಿವ್ ಎಂದು ಬಂದಿತ್ತು. ‌ನಂತರದಲ್ಲಿ ಜ್ವರ ಕಾಣಿಸಿಕೊಂಡ ಪರಿಣಾಮ ಏ.16ರಂದು ಮತ್ತೊಮ್ಮೆ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.

Advertisement

ಇದರೊಂದಿಗೆ ಜಿಲ್ಲೆಯ ಒಟ್ಟು 55 ಸೋಂಕಿತರಲ್ಲಿ 18 ಜನರು ಗುಣಮುಖರಾದಂತೆ ಆಗಿದೆ. ಐವರು ಸೋಂಕಿತರು ಮೃತಪಟ್ಟಿದ್ದು, 32 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next