Advertisement

ಕಿವುಡಿ-ಮೂಕಿಯ ಮೇಲೆ ರೇಪ್‌: 4 ಸೇನಾ ಜವಾನರ ವಿರುದ್ಧ ಕೇಸ್‌

04:42 PM Oct 17, 2018 | Team Udayavani |

ಪುಣೆ : ಕಿವುಡಿ ಮತ್ತು ಮೂಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಸೇನಾ ಸಿಬಂದಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

Advertisement

ಪುಣೆಯ ಖಡ್‌ಕಿ ಮಿಲಿಟರಿ ಆಸ್ಪತ್ರೆಗೆಯಲ್ಲಿ ಕಿವುಡಿ-ಮೂಕಿಯ ಮೇಲೆ ಈ ನಾಲ್ವರು ಸೇನಾ ಸಿಬಂದಿಗಳಿಂದ ನಾಲ್ಕು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆದಿತ್ತು. 

ಅತ್ಯಾಚಾರ ಸಂತ್ರಸ್ತ ಮಹಿಳೆಯು ಎನ್‌ಜಿಓ ನೆರವು ಪಡೆದ ಇಂದೋರ್‌ನಲ್ಲಿ ಪೊಲೀಸ್‌ ದೂರು ದಾಖಲಿಸಿದ್ದರು. ಈ ಆಘಾತಕಾರಿ ಘಟನೆಯ ಬಗ್ಗೆ ಬರೆಯಲಾಗಿರುವ ಪತ್ರವನ್ನು ರಕ್ಷಣಾ ಸಚಿವಾಲಯ ಮತ್ತು ಸೇನಾ ಮುಖ್ಯಸ್ಥರಿಗೆ ಕಳುಹಿಸಲಾಗಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಪುಣೆ ಎಸಿಪಿ ಕಲ್ಯಾಣರಾವ್‌ ವಿಧಾತೆ ಅವರು “ರೇಪ್‌ ಸಂತ್ತಸ್ತೆ ಕಿವುಡಿ ಹಾಗೂ ಮೂಕಿ ಆಗಿರುವುದರಿಂದಲೇ ನಾಲ್ವರೂ ಜವಾನರೂ ಆಕೆಯ ವೈಕಲ್ಯದ ಲಾಭ ಪಡೆದು ಅತ್ಯಾಚಾರ ನಡೆಸಿದರು. 205ರ ಜನವರಿಯಿಂದ ಜೂನ್‌ ವರೆಗಿನ ಅವಧಿಯಲ್ಲಿ ಆಕೆಯ ಮೇಲೆ ಪದೇ ಪದೇ ರೇಪ್‌ ನಡೆದಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next