Advertisement

ರವಿ ಪೂಜಾರಿ ಸಹಚರನ ಕೊಲೆಗೆ ಸ್ಕೆಚ್: ಮಂಗಳೂರಿನಲ್ಲಿ ನಾಲ್ವರು ರೌಡಿಶೀಟರ್ ಗಳ ಬಂಧನ

03:16 PM Mar 23, 2021 | Team Udayavani |

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ಸಹಚರರಲ್ಲಿ ಒಬ್ಬರನ್ನು ಕೊಲ್ಲಲು ಸ್ಕೆಚ್ ಹಾಕಿಕೊಂಡಿದ್ದ, ದರೋಡೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ನಾಲ್ವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.

Advertisement

ಕುಲಶೇಖರದ ದೀಕ್ಷಿತ್ ಪೂಜಾರಿ (32 ವ), ಸೋಮೇಶ್ವರದ ಚಂದ್ರಹಾಸ ಪೂಜಾರಿ ( 34 ವ), ಕೋಟೆಕಾರ್ ನ ಪ್ರಜ್ವಲ್ ಮತ್ತು ಚೇಳಾರ್ ನ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು ( 38 ವ) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಇಲ್ಲಿ ತಯಾರಾಗುವ ‘ಫ್ಲೈಯಿಂಗ್ ವಡೆ’ಗಳಿಗೆ ಗ್ರಾಹಕರು ಫಿದಾ!

ನಗರದ ಕುಲಶೇಖರದಲ್ಲಿ ಮಾ.17ರಂದು 3 ರಿಂದ ನಾಲ್ಕು ಅಪರಿಚತರು ಸ್ಕೂಟರ್ ಸವಾರರನ್ನು ಅಡ್ಡಗಟ್ಟಿ ಚೂರಿ ತೋರಿಸಿ, ಜೇಬಿನಲ್ಲಿದ್ದ ಮೊಬೈಲ್,ಹಣ, ಪವರ್ ಬ್ಯಾಂಕ್, ಎಟಿಎಂ ಕಾರ್ಡ್ ಕಿತ್ತುಕೊಂಡು. ಸ್ಕೂಟರ್ ಸುಲಿಗೆ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ವೇಳೆ ಈ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದು, ವಿಚಾರಣೆಯ ವೇಳೆ ಹಲವಾರು ಅಂಶಗಳನ್ನು ಬಾಯ್ಬಿಟ್ಟಿದ್ದಾರೆ.

Advertisement

ನಾಲ್ವರೂ ರೌಡಿ ಶೀಟರ್ ಗಳಾಗಿದ್ದು, ದೀಕ್ಷಿತ್ ಮೇಲೆ ಈಗಾಗಲೇ 12 ಪ್ರಕರಣಗಳು, ಚಂದ್ರಹಾಸನ ವಿರುದ್ಧ 7 ಪ್ರಕರಣಗಳು, ಪ್ರಜ್ವಲ್ ವಿರುದ್ಧ 9 ಪ್ರಕರಣಗಳು ಮತ್ತು ಸಂತೋಷ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ. ಇವರುಗಳು ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್ ನಲ್ಲಿರುವವರ ಸಹಚರರಾಗಿದ್ದು, ಡ್ರಗ್ಸ್ ದಂಧೆ, ಮರಳು ದಂಧೆ, ಹಫ್ತಾ ವಸೂಲಿಯಂತಹ ಕೆಲಸಗಳಲ್ಲಿ ತೊಡಗಿದ್ದರು.

ಕೊಲೆ ಸಂಚು: ಈ ಆರೋಪಿಗಳು ದೊಡ್ಡ ಗ್ಯಾಂಗ್ ಕಟ್ಟಿಕೊಂಡು ಎದುರಾಳಿಗಳಾದ ಪ್ರದೀಪ್ ಮೆಂಡನ್, ಮಂಕಿಸ್ಟಾಂಡ್ ವಿಜಯನ ಗ್ಯಾಂಗ್ ನವರನ್ನು ಗುರಿಯಾಗಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕಾಗಿ ಮಾರಾಕಾಸ್ತ್ರಗಳನ್ನು ಹೊಂದಿರುವ ಮತ್ತು ಇತರರನ್ನು ಸೇರಿಸಿ ಗ್ಯಾಂಗ್ ಕಟ್ಟುತ್ತಿದ್ದರು. ತಮ್ಮ ಸಂಚು ಸಾಧನೆಗಾಗಿ ಹಣದ ಅವಶ್ಯಕತೆ ಇರುವ ಕಾರಣ ತಡರಾತ್ರಿ ಸಂಚಾರ ಮಾಡುವವರನ್ನು ಮತ್ತು ಶ್ರೀಮಂತರನ್ನು ದರೋಡೆ ಮಾಡುತ್ತಿದ್ದರು.

ಇದನ್ನೂ ಓದಿ: ತಪ್ಪಿಸಿಕೊಳ್ಳಲು ಹೋಗಿ ಟಿಪ್ಪರ್‌ಗೆ ಸಿಲುಕಿ ಬಲಿಯಾದ ಬೈಕ್‌ ಸವಾರ

ಇದರಂತೆ ಕುಲಶೇಖರ ಮತ್ತು ನೀರುಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು. ಸದ್ಯ ಆರೋಪಿಗಳಿಂದ ದರೋಡೆ ಮಾಡಿದ ಎರಡು ದ್ವಿಚಕ್ರ ವಾಹನ, ಹಣ, ಮೊಬೈಲ್ ಫೋನ್ ಚಾರ್ಜರ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next