ಬೆಂಗಳೂರು: ಇತ್ತೀಚೆಗೆ ಸ್ನೇಹಿತನ ಮನೆಯಿಂದ ತಮ್ಮ ಮನೆಗೆ ಹೋಗುತ್ತಿದ್ದ ಆಪ್ಘಾನಿಸ್ತಾನದ ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿ ನಿಂದ ಇರಿದು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಅಗ್ರಹಾರ ದಾಸರಹಳ್ಳಿಯ ಚಂದ್ರಶೇಖರ್ (21), ದರ್ಶನ್ (19), ಪಾಪಯ್ಯ ಗಾರ್ಡನ್ ನ ವೈಭವ (19), ಬೋವಿ ಕಾಲೋನಿಯ ರಾಕೇಶ್‌ಕುಮಾರ್ (20) ಬಂಧಿತರು. ಆರೋ ಪಿಗಳಿಂದ 2 ಮೊಬೈಲ್, 1 ಸಾವಿರ ರೂ. ನಗದು, 2 ಅಮೆರಿಕನ್ ಡಾಲರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು ವಿವಿಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಇಬ್ಬರು ಆಫ್ಘಾನಿಸ್ತಾನದ ವಿದ್ಯಾ ರ್ಥಿಗಳು, ಮಾ.11ರಂದು ರಾತ್ರಿ ಸ್ನೇಹಿತನ ಮನೆಗೆ ಹೋಗಿದ್ದರು. ಮುಂಜಾನೆ 2 ಗಂಟೆ ಸುಮಾರಿಗೆ ಜ್ಞಾನಜ್ಯೋತಿ ನಗರದಲ್ಲಿರುವ ಮನೆಗೆ ವಾಪಸ್ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು, ಮಾರಕಾಸ್ತ್ರ ತೋರಿಸಿ, ಹಣ ಮೊಬೈಲ್ ಕೊಡುವಂತೆ ಬೆದರಿಸಿದ್ದಾರೆ. ಅದನ್ನು ನಿರಾಕರಿಸಿದಾಗ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೊಬೈಲ್, ಹಣ ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಇನ್‌ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಹುಕ್ಕಾಬಾರ್‌ಗೆ ಹೋಗುತ್ತಿದ್ದ ಆರೋಪಿಗಳು: ಆರೋಪಿಗಳ ಪೈಕಿ ಚಂದ್ರಶೇಖರ್ ಬೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾಕೇಶ್ ಫುಡ್ ಡೆಲಿವರಿ ಬಾಯ್ ಆಗಿದ್ದಾನೆ. ವೈಭಯ್ ಆಟೋ ಚಾಲಕನಾಗಿದ್ದು, ದರ್ಶನ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಮಾ.11ರಂದು ರಾಕೇಶ್‌ನ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಆರೋಪಿಗಳು ಮದ್ಯದ ಪಾರ್ಟಿ ಮಾಡಿದ್ದಾರೆ. ನಂತರ ಬಿಡದಿ ಬಳಿಯಿರುವ ಹುಕ್ಕಾಬಾರ್‌ಗೆ ಬೈಕ್‌ಗಳಲ್ಲಿ ಹೊರಟಿದ್ದರು. ಮದ್ಯದ ಅಮಲಿನಲ್ಲಿ ಆರೋ ಪಿಗಳು ಎದುರಿಗೆ ಸಿಕ್ಕ ವಿದ್ಯಾರ್ಥಿಗಳ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.