Advertisement
ಡಿ. 17ರಂದು ಬೊರಿವಲಿ ಪಶ್ಚಿಮದ ಹೋಲಿಕ್ರಾಸ್ ರೋಡ್, ಐ.ಸಿ. ಕಾಲನಿಯಲ್ಲಿ ಸಂಘದ ನೂತನ ಅಂತಾರಾಷ್ಟ್ರೀಯ ಶಾಲಾ ಕಟ್ಟಡದ ಶಿಲಾನ್ಯಾಸ ಸಮಾರಂಭ ಹಾಗೂ ಭೂಮಿ ಪೂಜೆಯ ಸಂದರ್ಭದಲ್ಲಿ ಜರಗಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಮುಖ್ಯ ಅತಿಥಿ, ಸಂಸದ ಗೋಪಾಲ್ ಸಿ. ಶೆಟ್ಟಿ ಮಾತನಾಡಿ, ಬೊರಿವಲಿಯ ಐಸಿ ಕಾಲನಿಯಲ್ಲಿ ಸುಮಾರು 31 ಶಾಲೆಗಳು ಈಗಾಗಲೇ ಕಾರ್ಯನಿರತವಾಗಿದ್ದು, ಇದೀಗ ಸಂಘದ ನೂತನ ಶಿಕ್ಷಣ ಯೋಜನೆಯ ಅಂತಾರಾಷ್ಟ್ರೀಯ ಶಾಲೆಯು 32ನೇ ಶಾಲೆಯಾಗಿ, ಗುಣಮಟ್ಟದಲ್ಲಿ ಇತರ ಶಾಲೆಗಳಿಗಿಂತ ಭಿನ್ನವಾಗಿ ಹೆಸರು ಗಳಿಸಲೆಂದು ಆಶಿಸುತ್ತೇನೆ. ಬಂಟರ ಭವನ ನಿರ್ಮಾಣದ ಕುರಿತು ಅವಲೋಕಿಸಿದರೆ, ಸಂಘದ ಯಶಸ್ಸಿನ ಬಗ್ಗೆ ಗೌರವ ಇನ್ನೂ ಹೆಚ್ಚುತ್ತದೆ, ಆಶ್ಚರ್ಯವೂ ಆಗುತ್ತದೆ ಎಂದು ತಿಳಿಸಿದರು. ಸಾಮಾಜಿಕ ಕಾರ್ಯದಲ್ಲಿ ಎಲ್ಲ ಪಕ್ಷಗಳು ಮತ ಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಭಿಮಾನ ವ್ಯಕ್ತಪಡಿಸಿದ ಅವರು, ಸಂಘದ ಯಾವುದೇ ಸೇವೆಗೆ ಸದಾ ಸಿದ್ಧ ಎಂದು ಭರವಸೆ ನೀಡಿದರು.
ಸಂಘದ ಕೀರ್ತಿ ಮತ್ತಷ್ಟು ಹೆಚ್ಚಲಿ: ಐಕಳ ಹರೀಶ್ ಶೆಟ್ಟಿ :
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ, ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಬಂಟರಿಗೆ ಇಂದು ಬಹಳ ಸಂತಸದ ದಿನವಾಗಿದೆ. ಮುಂಬಯಿಯ ಉಪನಗರದಲ್ಲೊಂದು ಶಾಲೆಯ ಅಗತ್ಯವಿತ್ತು. ಬೊರಿವಲಿಯಲ್ಲಿ ಆರಂಭಗೊಳ್ಳಲಿ ರುವ ಅಂತಾರಾಷ್ಟ್ರೀಯ ಶಾಲೆಯಿಂದ ಪರಿಸರದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ನೂತನ ಶಾಲೆ ಯು ಸಂಘದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸಿದರು.
ಬಂಟರ ಸಂಘದ ಸಾಧನೆ ಅದ್ಭುತ: ಪ್ರವೀಣ್ ದರೇಕರ್ :
ಗೌರವ ಅತಿಥಿ, ವಿಧಾನ ಪರಿಷತ್ ವಿಪಕ್ಷ ನಾಯಕ ಪ್ರವೀಣ್ ದರೇಕರ್ ಮಾತನಾಡಿ, ಬಂಟರ ಸಂಘದ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಬಂಟರ ಬಗ್ಗೆ ನನಗೆ ಅಭಿಮಾನವಿದೆ. ಶೈಕ್ಷಣಿಕ ಕ್ಷೇತ್ರದಲ್ಲಂತೂ ಬಂಟರ ಸಂಘದ ಅದ್ಭುತ ಸಾಧನೆ ಮಾಡಿದೆ. ಮುಂಬಯಿ ಜಿಲ್ಲಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ನೀಡಲು ಸಿದ್ಧನಿರುವುದಾಗಿ ಭರವಸೆ ನೀಡಿದರು.