Advertisement

ಕಾವೇರಿ- ವೈಗೈ- ಗುಂಡಾರ್‌ ನದಿ ಜೋಡಣೆ ಯೋಜನೆಗೆ ತಮಿಳುನಾಡು ಸರ್ಕಾರ ಶಂಕುಸ್ಥಾಪನೆ

07:40 PM Feb 21, 2021 | Team Udayavani |

ಪುದುಕೊಟ್ಟೈ: ಬರ ಪ್ರದೇಶಗಳಿಗೆ ಹೆಚ್ಚುವರಿ ನೀರು ಪೂರೈಸುವ ಸಲುವಾಗಿ 14,400 ಕೋಟಿ ರೂ. ವೆಚ್ಚದಲ್ಲಿ ಕಾವೇರಿ- ವೈಗೈ- ಗುಂಡಾರ್‌ ನದಿಗಳ ಜೋಡಣೆ ಯೋಜನೆಗೆ ತಮಿಳುನಾಡು ಸರ್ಕಾರ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದೆ.

Advertisement

ಯೋಜನೆಯ 1ನೇ ಹಂತದ ಕಾಮಗಾರಿಗೆ ಸಿಎಂ ಕೆ. ಪಳನಿಸ್ವಾಮಿ ಅಡಿಗಲ್ಲು ಹಾಕಿ, ಭೂಮಿಪೂಜೆ ನೆರವೇರಿಸಿದರು. ಕಾವೇರಿ- ದಕ್ಷಿಣ ವೆಲ್ಲಾರ್‌- ವೈಗೈ- ಗುಂಡಾರ್‌ ನದಿಗಳನ್ನು ಪರಸ್ಪರ ಜೋಡಿಸುವ ಈ ಕಾಮಗಾರಿಯಿಂದ 6 ಸಾವಿರ ಕ್ಯುಬಿಕ್‌ ಅಡಿ ನೀರನ್ನು ರಾಜ್ಯದ ದಕ್ಷಿಣ ಭಾಗದ ಬರಪ್ರದೇಶಗಳಿಗೆ ಪೂರೈಸಲಾಗುತ್ತದೆ. ಇದರಿಂದಾಗಿ ತಿರುಚಿರಾಪಳ್ಳಿ, ಪುದುಕೊಟ್ಟೈ, ಶಿವ ಗಂಗಾ, ವಿರುಧುನಗರ್‌, ರಾಮನಾಥಪುರಂ, ಕರೂರ್‌ನ 1 ಸಾವಿರ ಕೆರೆಗಳು ಭರ್ತಿಯಾಗಲಿವೆ. ಲಕ್ಷಾಂತರ ಎಕರೆ ಜಮೀನಿಗೆ ನೀರು ಪೂರೈಕೆಯಾಗಲಿದೆ.

ಇದನ್ನೂ ಓದಿ:ಮತ್ತಿಬ್ಬರು ಶಾಸಕರ ರಾಜೀನಾಮೆ…ಬಹುಮತ ಸಾಬೀತು ಮುನ್ನವೆ ಸಿಎಂ ನಾರಾಯಣಸ್ವಾಮಿಗೆ ಆಘಾತ

Advertisement

Udayavani is now on Telegram. Click here to join our channel and stay updated with the latest news.

Next