Advertisement

ಪರಪು-ಕೊಯ್ಯೂರು ರಸ್ತೆಗೆ ಶಿಲಾನ್ಯಾಸ  

01:38 PM Mar 02, 2018 | Team Udayavani |

ಬೆಳ್ತಂಗಡಿ: ಜನರ ಒತ್ತಾಯದ ಮೇರೆಗೆ 1.10 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ವಸಂತ ಬಂಗೇರ ತಿಳಿಸಿದರು. ಅವರು ಗುರುವಾರ ಪರಪ್ಪು – ಕೊಯ್ಯೂರು ರಸ್ತೆ ಕಾಮಗಾರಿಗೆ ಪರಪ್ಪು ಹಾಗೂ ಎರಕಡಪ್ಪು ಎಂಬಲ್ಲಿ ಚಾಲನೆ ನೀಡಿ ಮಾತನಾಡಿದರು.

Advertisement

ಈ ಬಾರಿ ಪ್ಯಾಚ್‌ವರ್ಕ್‌ ಮಾಡಿ, ಡಾಮರು ನಡೆಸಲಾಗುವುದು. ಬಳಿಕ ಈ ರಸ್ತೆ ಮೇಲ್ದರ್ಜೆಗೇರಲಿದೆ. ಸರಕಾರದ ಹಣವನ್ನು ಯಾರೂ ದುರುಪಯೋಗ ಮಾಡಬಾರದು. ಸ್ಥಳೀಯವಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಟನಕಾರರಿಗೆ ತರಾಟೆ
ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಅಭಿವೃದ್ಧಿ ಮಾಡುವುದಾಗಿ ಸ್ಥಳಕ್ಕೆ ಆಗಮಿಸಿ ತಿಳಿಸಿದ್ದರೂ ಉದ್ದೇಶಪೂರ್ವಕವಾಗಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ನಡೆಸಿದವರು ಈಗ ಅಭಿವೃದ್ಧಿ ಕಾರ್ಯನಡೆಸುವಾಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಸುದಿನ ಫಲಶ್ರುತಿ
ಸುಮಾರು 7 ವರ್ಷಗಳಿಂದ ರಸ್ತೆ ದುರವಸ್ಥೆಯಿಂದ ಕೂಡಿದ್ದು, ಈ ಬಗ್ಗೆ ಸುದಿನದಲ್ಲಿ ವರದಿ ಪ್ರಕಟಿಸಿ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.

ಸ್ಥಳದಲ್ಲಿ ಜಿ.ಪಂ. ಮಾಜಿ ಸದಸ್ಯ ಸುಂದರ ಗೌಡ ಇಚ್ಚಿಲ, ಗ್ರಾ.ಪಂ. ಅಧ್ಯಕ್ಷ ಶರತ್‌ ಕುಮಾರ್‌, ತಾಪಂ ಸದಸ್ಯ ಪ್ರವೀಣ್‌ ಕುಮಾರ್‌, ವಕ್ಫ್ ಬೋರ್ಡ್‌ ಸದಸ್ಯ ಕರೀಂ, ಸ್ಥಳೀಯ ಗ್ರಾ.ಪಂ. ಸದಸ್ಯರು ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next