Advertisement

‘ಫೌಂಡೇಶನ್‌ ಕಾರ್ಯ ಮಾದರಿ’

12:38 PM Nov 08, 2017 | |

ಉಳ್ಳಾಲ: ಫೌಂಡೇಶನ್‌ ಸ್ಥಾಪಿಸಿ ಬಡ ವರ್ಗದವರಿಗೆ ಸಹಕರಿಸುವಂತಹ ಕಾರ್ಯ ಸಮಾಜ ಮೆಚ್ಚುವಂತಹದ್ದು, ಇಂತಹ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದು ಸಹಾಯಕ ಪೊಲೀಸ್‌ ಆಯುಕ್ತ ಕೆ.ರಾಮ ರಾವ್‌ ಹೇಳಿದರು.

Advertisement

ಅವರು ಶ್ರವಣ ದೋಷವುಳ್ಳ ಖತೀಜ ಎಂಬ ಬಡ ಕುಟುಂಬದ ಮಹಿಳೆಗೆ ಕಲ್ಲಾಪು ಪೊಲೀಸ್‌ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹೆಲ್ಫ್ ಇಂಡಿಯಾ ಫೌಂಡೇಶನ್‌ ದಾನವಾಗಿ ನೀಡಿದ 20,000 ರೂ. ಮೌಲ್ಯದ ಶ್ರವಣ ಕಿಟ್‌ ಹಾಗೂ ವೈಯಕ್ತಿಕ ಸಹಾಯಧನ ವಿತರಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ಶ್ರವಣ ದೋಷವುಳ್ಳ ಹಲವರಿಗೆ ಫೌಂಡೇಶನ್‌ ಶ್ರವಣ ಕಿಟ್‌ ವಿತರಿಸಿ ಅವರನ್ನು ಸಮಾಜದ ಎಲ್ಲರೊಂದಿಗೂ ಬೆರೆಯುವಂತೆ ಮಾಡಿರುವ ಕಾರ್ಯ ಶ್ಲಾಘನೀಯವಾದುದು. ಇಂತಹ ಸಾಮಾಜಿಕ ಕಾರ್ಯ ಫೌಂಡೇಶನ್‌ ವತಿಯಿಂದ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಹೆಲ್ಫ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ರಾಝಿಕ್‌ ಉಳ್ಳಾಲ್‌, ಉಪಾಧ್ಯಕ್ಷ ಫಾರುಕ್‌ ಪಟ್ಲ, ಸಿರಾಜ್‌, ಝಾಕಿರ್‌, ಸಂಶುದ್ದೀನ್‌ ಎ.ಕೆ., ನಿಯಾಝ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next