Advertisement

ಜ್ಞಾನವಾಪಿಯಲ್ಲಿ ಛಿದ್ರ ವಿಗ್ರಹ ಪತ್ತೆ? ASI ಯ 2ನೇ ದಿನದ ಸಮೀಕ್ಷೆಯಲ್ಲಿ ಉಲ್ಲೇಖ

10:12 PM Aug 05, 2023 | Team Udayavani |

ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿ ದೇಗುಲದ ಕುರುಹುಗಳು ಪತ್ತೆಯಾಗಿವೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ನಡೆಸುತ್ತಿರುವ ಸಮೀಕ್ಷೆಯ ವೇಳೆ ಛಿದ್ರಗೊಂಡ ವಿಗ್ರಹಗಳ ಕುರುಹು ಪತ್ತೆಯಾಗಿವೆ. ಇದರ ಜತೆಗೆ ತ್ರಿಶೂಲ, ಸ್ವಸ್ತಿಕದ ಚಿಹ್ನೆಗಳು ಕಂಡುಬಂದಿವೆ. ಅದನ್ನು ಎಎಸ್‌ಐ ವೀಡಿಯೋ ಚಿತ್ರೀಕರಣದ ಮೂಲಕ ದಾಖಲಿಸಿಕೊಂಡಿದೆ. ಇದರ ಜತೆಗೆ ಅಲ್ಲಿ ಗಂಟೆ, ಹೂವಿನ ಆಕಾರಗಳು ಕೂಡ ಇರುವುದು ದೃಢಪಟ್ಟಿದೆ.

Advertisement

ಸದ್ಯ ಮಸೀದಿಯ ಪ್ರಾರ್ಥನೆ ಮಾಡುವ ಸ್ಥಳದಲ್ಲಿ ವಿಗ್ರಹದ ಚೂರುಗಳು ಇರುವುದು ದೃಢಪಟ್ಟಿದೆ. ಸಮೀಕ್ಷೆಯ ಮುಂದಿನ ಹಂತದಲ್ಲಿ ವಿಗ್ರಹ ಸಿಗುವ ವಿಶ್ವಾಸವಿದೆ. ಮಸೀದಿ ಆಡಳಿತ ಮಂಡಳಿಯವರು ಸಮೀಕ್ಷೆಯಲ್ಲಿ ಸಹಕರಿಸುತ್ತಿದ್ದಾರೆ ಎಂದು ಹಿಂದೂಗಳ ಪರ ವಕೀಲ ಸುಧೀರ್‌ ತ್ರಿಪಾಠಿ ಹೇಳಿದ್ದಾರೆ.

ಕಾನ್ಪುರದಲ್ಲಿ ಇರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಮತ್ತು ತಜ್ಞರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಇಂತೆಜಾಮಿಯಾ ಮಸೀದಿ ಕಮಿಟಿಯ ಪರ ಐವರು ಸದಸ್ಯರು ಸಮೀಕ್ಷೆಯ ಸಂದರ್ಭದಲ್ಲಿ ಇದ್ದರು ಎಂದು ವಕೀಲ ತೌಹೀದ್‌ ಥಾನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next