Advertisement

ಫೋರ್ಟ್‌ ಕನ್ನಡ ಭವನ ಸೊಸೈಟಿ: ಸಮವಸ್ತ್ರ ಮತ್ತು ಶಾಲಾ ಪರಿಕರಗಳ ವಿತರಣೆ

02:06 PM Jul 13, 2018 | Team Udayavani |

ಮುಂಬಯಿ: ಪರಿಶ್ರಮ ಮತ್ತು ಶ್ರದ್ಧೆಯೇ ಶಿಕ್ಷಣತ ಯಶಸ್ಸಿಗೆ ಮೂಲವಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆಯೇ ಯಶಸ್ಸನ್ನು ಸಾಧಿಸುವ ಮೂಲ ಮಂತ್ರವಾಗಿದೆ. ನಮ್ಮದೇ ಆದ ನಾಡುನುಡಿಯಲ್ಲಿ ವಿದ್ಯಾರ್ಜನೆಗೈದು ಯಶಸ್ಸನ್ನು ಪಡೆಯುತ್ತಿರುವ ಕನ್ನಡ ಭವನದ ಮಕ್ಕಳು ಹಾಗೂ ಭಾಷಾಭಿಮಾನವನ್ನು ಮೆರೆಯುತ್ತಿರವ ಶಿಕ್ಷಕರು ನಿಜವಾಗಿಯೂ ಅಭಿನಂದನೀಯರು. ಕನ್ನಡದ ವಿದ್ಯಾರ್ಥಿಗಳ ನೆರವಿಗಾಗಿ ನಾನು ಸದಾ ಸಿದ್ಧನಿದ್ದೇನೆ ಎಂದು ಉದ್ಯಮಿ, ಸಮಾಜ ಸೇವಕ ಶ್ರೀನಿವಾಸ್‌ ಶೆಟ್ಟಿ ಅವರು ನುಡಿದರು.

Advertisement

ಜು. 6 ರಂದು ಫೋರ್ಟ್‌ ಪರಿಸರದ ಕನ್ನಡ ಭವನ ಸಭಾಗೃಹದಲ್ಲಿ ನಡೆದ ಪ್ರಸ್ತುತ ವರ್ಷ ಬದಲಾವಣೆಗೊಂಡ ಸಮವಸ್ತ್ರ ವಿತರಣೆ ಮತ್ತು ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಪ್ರಸ್ತುತ ವರ್ಷ ಶಾಲೆಯ ಸಮವಸ್ತÅ ಬದಲಾವಣೆಗೊಂಡು ನೂತನ ಸಮವಸ್ತ್ರ ವಿತರಣೆಯಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿ ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ನುಡಿದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ನೂತನ ಸಮವಸ್ತ್ರ ಮತ್ತು ಶಾಲಾ ಪರಿಕರಗಳ ಪ್ರಾಯೋಜಕರಾದ ಉದ್ಯಮಿ ಶ್ರೀನಿವಾಸ್‌ ಶೆಟ್ಟಿ ಮತ್ತು  ಶ್ರೀದೇವಿ ದಂಪತಿಯನ್ನು ಶಾಲೆಯ ವತಿಯಿಂದ ಕನ್ನಡ ಭವನ ಎಜುಕೇಶನ್‌ ಸೊಸೈಟಿಯ ಕಾರ್ಯಾಧ್ಯಕ್ಷ ಎ. ಬಿ. ಶೆಟ್ಟಿ ಮತ್ತು  ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಭವನ ಎಜುಕೇಶನ್‌ ಸೊಸೈಟಿಯ ಕಾರ್ಯಾಧ್ಯಕ್ಷ ಎ. ಬಿ. ಶೆಟ್ಟಿ ಅವರು ಮಾತನಾಡಿ, ಇದ್ಯೆಯು ಇಂದಿನ ಯುಗದಲ್ಲಿ ಮನುಷ್ಯನ ಮೂಲಭೂತ ಆವಶ್ಯಕತೆಗಳಲ್ಲಿ ಒಂದಾಗಿದೆ. ಕನ್ನಡ ಭವನವು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈಯಕ್ತಿಕ ಶೇ. 94.20 ಅಂಕಗಳನ್ನು ನಮ್ಮ ಶಾಲೆಯ ವಿದ್ಯಾರ್ಥಿನಿ ಸುಮಾ ಗೌಡ ಅವರು ಪಡೆದು ಕನ್ನಡ ಮಾಧ್ಯಮದಲ್ಲಿ ಮುಂಬಯಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅಲ್ಲದೆ ಶಾಲಾ ಫಲಿತಾಂಶ ಶೇ. 94 ರಷ್ಟು ಬಂದಿರುವುದು ಸಂತೋಷದ ಸಂಗತಿಯಾಗಿದೆ. ಈ ಬೆಳವಣಿಗೆ ನಮ್ಮ ಸಂಸ್ಥೆಯ ನಾಡು-ನುಡಿ ಸೇವೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಪ್ರಸ್ತುತ ವರ್ಷ ನೂತನ ಸಮವಸ್ತ್ರದ ಬದಲಾವಣೆಯೊಂದಿಗೆ ಕನ್ನಡ ಭವನ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.

ಉಪಾಧ್ಯಕ್ಷ ಡಿ. ಬಿ. ಅಮೀನ್‌, ಕೇಶವ ಕೋಟ್ಯಾನ್‌, ಕಾರ್ಯದರ್ಶಿ ಶೇಖರ್‌ ಅಮೀನ್‌ ಅವರು ಮಾತನಾಡಿ ಶುಭಹಾರೈಸಿದರು. ಪ್ರಾರಂಭದಲ್ಲಿ ಕನ್ನಡ ಭವನದ ಉಪಾಧ್ಯಕ್ಷ ಡಿ. ಬಿ. ಅಮೀನ್‌ ಅವರು ಪ್ರಾಯೋಜಿಸಿದ ಶುದ್ಧ ಕುಡಿಯುವ ನೀರಿನ ಯಂತ್ರಕ್ಕೆ ಮುಖ್ಯ ಅತಿಥಿ ಶ್ರೀನಿವಾಸ ಶೆಟ್ಟಿ ಅವರು ಚಾಲನೆ ನೀಡಿದರು.
ಸಮ್ಮಾನ ಸ್ವೀಕರಿಸಿದ ಶ್ರೀದೇವಿ ಶ್ರೀನಿವಾಸ್‌ ಶೆಟ್ಟಿ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಶಾಲಾ ಪ್ರಾಂಶುಪಾಲ ಎಲ್‌. ರಾಧಾಕೃಷ್ಣ ಅವರು ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕಿ ವಸಂತಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ವಿಟuಲ ಮಣೂರೆ ವಂದಿಸಿದರು. ಶಿವಾನಂದ ಪಾಟೀಲ್‌ ಅವರು ಸಹಕರಿಸಿದರು.

Advertisement

ವೇದಿಕೆಯಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ, ಜತೆ ಕೋಶಾಧಿಕಾರಿ ಸತೀಶ್‌ ಎನ್‌. ಬಂಗೇರ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀನಿವಾಸ ಪೂಜಾರಿ, ಸಂಸ್ಥೆಯ  ಶಾಲಾ-ಕಾಲೇಜಿನ  ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬಂದಿಗಳು, ಪಾಲಕರು-ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next