Advertisement

ಕೂದಲಿಗೆ ಆರೈಕೆಯ ಸೂತ್ರಗಳು

06:00 AM Jul 11, 2018 | |

1. ಕಿರಣಗಳಿಂದ ರಕ್ಷಿಸಿ 
ಸೂರ್ಯನ ನೇರ ಹಾಗೂ ತೀಕ್ಷ್ಣ ಕಿರಣಗಳು ಕೂದಲಿನ ಆರೋಗ್ಯಕ್ಕೂ ಹಾನಿಕರ. ಕೂದಲು ಸೀಳುಬಿಟ್ಟು, ಬಣ್ಣ ಮಾಸುವ ಅಪಾಯ ಕೂಡ ಹೆಚ್ಚು. ಮನೆಯಿಂದ ಹೊರಗೆ ಹ್ಯಾಟ್‌ ಧರಿಸುವ, ಸ್ಕಾಫ್ì ಕಟ್ಟುವ ಅಭ್ಯಾಸ ಮಾಡಿಕೊಳ್ಳಿ. ಇದು ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುವುದಲ್ಲದೆ, ನೆತ್ತಿಯ ಆದ್ರìತೆಯನ್ನು ಉಳಿಸುತ್ತದೆ. 
                                                                                                                                                      
2. ಈಜುವ ಮುನ್ನ… 
ಬೀಚ್‌ನಲ್ಲಿ ಆಟವಾಡುವುದು, ರಾಸಾಯನಿಕ ಬಳಸಿದ ಈಜುಕೊಳದಲ್ಲಿ ಈಜುವುದರಿಂದ ಕೂದಲು ಉದುರಬಹುದು. ಹೀಗೆ ಈಜಾಡುವ ಮುನ್ನ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಈಜಿದ ಮೊದಲು ಮತ್ತು ನಂತರ ತಲೆಗೆ ಸ್ನಾನ ಮಾಡಿ. ಇದಲ್ಲದೆ, ಈಜುವಾಗ ಈಜು ಟೋಪಿ ಬಳಸಲು ನೆರವಾಗುವಂತೆ ಕೂದಲನ್ನು ಜಡೆ ಹಾಕಿ. 
  
3. ನೈಸರ್ಗಿಕವಾಗಿ ಒಣಗಿಸಿ
ಸ್ನಾನದ ನಂತರ ಕೂದಲು ಒಣಗಿಸಲು ಹೇರ್‌ ಡ್ರೈಯರ್‌ ಬಳಸುವುದು ಅಷ್ಟು ಉತ್ತಮವಲ್ಲ. ತಲೆಗೂದಲನ್ನು ನೈಸರ್ಗಿಕ ಗಾಳಿಯಲ್ಲೇ ಒಣಗಲು ಬಿಡಿ. ಬೇಸಿಗೆಯಲ್ಲಿ ಫ್ಲಾಟ್‌ ಐರನ್‌ ಅಥವಾ ಕರ್ಲಿಂಗ್‌ ಐರನ್‌ ಮಾದರಿಯ ಹೇರ್‌ಕಟ್‌ ಸೂಕ್ತ. 

Advertisement

4. ಎಣ್ಣೆ ಹಚ್ಚಿ ಸ್ನಾನ ಮಾಡಿ
ತೆಂಗಿನಕಾಯಿ, ಆಲಿವ್‌ ಮತ್ತು ಅವಕಾಡೊ ಎಣ್ಣೆಗಳು ಕೂದಲಿಗೆ ಮತ್ತು ನೆತ್ತಿಯ ಆದ್ರìತೆಗೆ ಉತ್ತಮ. ಕೂದಲಿನ ತುದಿಯಿಂದ ಬುಡದವರೆಗೂ ಎಣ್ಣೆ ಹಚ್ಚಿ. ಒಂದು ಹದವಾದ ಶ್ಯಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. 

5. ಹೇರ್‌ ಜೆಲ್‌ ಬಳಸಿ 
ಬೇಸಿಗೆಯಲ್ಲಿ ಕೂದಲಿಗೆ ತೇವಾಂಶ ಬೇಕಾಗುತ್ತದೆ. ಒಣ ಚರ್ಮಕ್ಕೆ ಲೋಷನ್‌ ಇದ್ದಂತೆ, ಕೂದಲಿಗೆ ತೇವಾಂಶವನ್ನು ಒದಗಿಸುವ ಹೇರ್‌ ಜೆಲ್‌ ಬಳಸಿ. ಕೂದಲು ಸಿಕ್ಕಾಗುವುದನ್ನೂ ಇದರಿಂದ ತಡೆಯಬಹುದು. 

 - ಡಾ. ಚಿತ್ರಾ ಆನಂದ್‌

Advertisement

Udayavani is now on Telegram. Click here to join our channel and stay updated with the latest news.

Next