Advertisement
ಕಳೆದ ತಿಂಗಳು ಅಂಬಿಕಾಪತಿ ಅವರ ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್‌ನ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದ ವೇಳೆ 42 ಕೋಟಿ ರೂ. ಹಣ ಪತ್ತೆಯಾಗಿತ್ತು.
ಐಟಿ ಅಧಿಕಾರಿಗಳು ಕೆಲವು ಚಿನ್ನದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಪತ್ತೆಯಾದ ಕೆಲವು ದಾಖಲೆಗಳನ್ನು ಪರಿಶೀಲಿಸಿ ಅಂಗಡಿ ಮಾಲಕರಿಂದ ಮಾಹಿತಿ ಕಲೆ ಹಾಕಿದಾಗ ಅಂಬಿಕಾಪತಿ ಹಾಗೂ ಆತನ ಪುತ್ರರ ಬಳಿ ಭಾರೀ ಪ್ರಮಾಣದ ನಗದು ಸಂಗ್ರಹವಾಗಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಇದರ ಆಧಾರದಲ್ಲಿ ಅಂಬಿಕಾಪತಿ ನಿವಾಸದ ಮೇಲೆ ದಾಳಿ ಮಾಡಿದಾಗ ಮಂಚದ ಕೆಳಗೆ ಬಾಕ್ಸ್‌ಗಳಲ್ಲಿ ತುಂಬಿ ಇಟ್ಟಿದ್ದ ಕಂತೆ-ಕಂತೆ ಗರಿ ಗರಿ 500 ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು. ರಾತ್ರಿ ಕಾರ್ಪೆಂಟರ್‌ಗಳನ್ನು ಕರೆತಂದು ಲಾಕರ್ ಒಡೆದಾಗ ಎರಡು ಸೂಟ್‌ಕೇಸ್ ಪತ್ತೆಯಾಗಿದ್ದು, ಅದನ್ನು ತೆರೆದಾಗ ನಗದು, ಚಿನ್ನಾಭರಣ, ವಿವಿಧ ರಿಯಲ್ ಎಸ್ಟೇಟ್ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿತ್ತು.