Advertisement

ಸೈನಿಕನಾಗಿ ಬದಲಾಗಿದ್ದ ಮಾಜಿ ಉಗ್ರ ಗುಂಡಿನ ಕಾಳಗದಲ್ಲಿ ಹುತಾತ್ಮ!

02:50 PM Nov 27, 2018 | |

ಜಮ್ಮು: ಉಗ್ರನಾಗಿ ಕಾಶ್ಮೀರ ಜಿಹಾದ್‌ ಚಳುವಳಿಯಲ್ಲಿ ಪಾಲ್ಗೊಂಡು ಪರಿವರ್ತನೆ ಜಗದ ನಿಯಮ ಎನ್ನುವ ಹಾಗೆ ಮನಪರಿವರ್ತನೆಯಾಗಿ ಸೈನಿಕರಿಗೆ ಶರಣಾಗಿ ಸೇನೆಗೆ ಸೇರ್ಪಡೆಯಾಗಿದ್ದ ನಾಜಿರ್‌ ಅಹ್ಮದ್‌ ವಾನಿ ಅವರು ಮಂಗಳವಾರ ಹುತಾತ್ಮರಾಗಿದ್ದಾರೆ. 

Advertisement

ಭಾನುವಾರ ಶೋಪಿಯಾನ್‌ ನಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಉಗ್ರರ ಗುಂಡು ತಗುಲಿ 38 ರ ಹರೆಯದ ಲ್ಯಾನ್ಸ್‌ ನಾಯಕ್‌ ನಾಜಿರ್‌ ಅಹ್ಮದ್‌ ಖಾನ್‌ ಅವರು ಹುತಾತ್ಮರಾಗಿದ್ದರು. 

ನಾಜಿರ್‌ ಅವರ ಹುಟ್ಟುರು ಕುಲ್‌ಗಾಂನ ಚೆಕಿ  ಅಶುಮುಜಿ ಗ್ರಾಮದಲ್ಲಿ  ಸೋಮವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಪಾರ್ಥೀವ ಶರೀರದ ಮೇಲೆ ರಾಷ್ಟ್ರ ಧ್ವಜ ಹೊದಿಸಿ, 21 ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. 500 ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿ ಗೌರವ ಸಲ್ಲಿಸಿದರು.

 

Advertisement

ಲ್ಯಾನ್ಸ್‌ ನಾಯಕ್‌ ನಾಜಿರ್‌ ಅಹ್ಮದ್‌ ವಾನಿ ಅವರ ಬಲಿದಾನ ದೇಶ ಮತ್ತು ಕಾಶ್ಮೀರಕ್ಕೆ ಕೊಟ್ಟ ಅತ್ಯಂತ ದೊಡ್ಡ ತ್ಯಾಗ ಎಂದು ಸೇನಾ ಅಧಿಕಾರಿಗಳು ಬಣ್ಣಿಸಿದ್ದಾರೆ.

2004 ರಲ್ಲಿ ಪ್ರಾಂತೀಯ ಪಡೆಯಾಗಿರುವ ರಾಷ್ಟ್ರೀಯ ರೈಫ‌ಲ್ಸ್‌ಗೆ ಸೇವೆಗೆ ಸೇರ್ಪಡೆಯಾಗಿದ್ದ ನಾಜಿರ್‌ ಅವರು ಹಲವು ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 2007 ರಲ್ಲಿ ಅವರಿಗೆ ಸೇನಾ ಪದಕ ನೀಡಿ ಪುರಸ್ಕರಿಸಲಾಗಿತ್ತು.

ವಾನಿ ಅವರು ಪತ್ನಿ ಮತ್ತು 20 ಮತ್ತು 18 ವರ್ಷ ಪ್ರಾಯದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ನಾಜಿರ್‌ ಅಹ್ಮದ್‌ ವಾನಿ ಅವರು ಉಗ್ರವಾದದತ್ತ ಆಕರ್ಷಿತರಾಗುವ ಯುವಕರಿಗೆ ಮಾದರಿಯಾಗಿ ದೇಶಕ್ಕಾಗಿ ದುಡಿಯುವಂತೆ ಮಾಡಲಿ. ಈ ಮಣ್ಣಿನಲ್ಲಿ ಮತ್ತೆ ಹುಟ್ಟಿ ಬರಲಿ. 

Advertisement

Udayavani is now on Telegram. Click here to join our channel and stay updated with the latest news.

Next