Advertisement
ಕಾಂಗ್ರೆಸ್ ನೇತೃತ್ವದ ಮಿತ್ರಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿರುವ ಮಾಜಿ ಸ್ಪೀಕರ್ ಮೀರಾಕುಮಾರ್ ಅವರಿಗೆ ಬೆಂಬಲ ನೀಡಲು ಮಾಜಿ ಪ್ರಧಾನಿ ದೇವೇಗೌಡ ನಿರ್ಧರಿಸಿದ್ದಾರೆ. ಹೀಗಾಗಿ ಮೀರಾಕುಮಾರ್ ಅವರ ನಾಮಪತ್ರಕ್ಕೆ ದೇವೇಗೌಡ, ಕುಮಾರಸ್ವಾಮಿ ಮತ್ತು ಮಧುಬಂಗಾರಪ್ಪ ಅವರು ಸಹಿ ಮಾಡಿದ್ದಾರೆ.
Related Articles
Advertisement
ಸೂಚಕರಾಗಿ ಸಿದ್ದು ಸಹಿ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೀರಾಕುಮಾರ್ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದಾರೆ. ಭಾನುವಾರ ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಮ್ಮುಖದಲ್ಲಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದರು. ಈ ಮಧ್ಯೆ ಸಂಸದ ವೀರಪ್ಪ ಮೊಯ್ಲಿ, ಸಚಿವರಾದ ಡಿ.ಕೆ. ಶಿವಕುಮಾರ್, ತನ್ವೀರ್ ಸೇs… ಸಹ ಸಹಿ ಹಾಕಿದರು.
ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರು ಜೂ.28ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲು ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳವಾರ ದೆಹಲಿಗೆ ತೆರಳಲಿದ್ದಾರೆ.
ಮೀರಾಕುಮಾರ್ ನಮ್ಮ ಅಭ್ಯರ್ಥಿ. ಅವರನ್ನು ಬೆಂಬಲಿಸಿ ನಾಮಪತ್ರಕ್ಕೆ ಸೂಚಕರಾಗಿ ನಾನು ಸೇರಿದಂತೆ ಸಂಸದರು, ಸಚಿವರು ಮತ್ತು ಶಾಸಕರು ಸಹಿ ಮಾಡಿದ್ದಾರೆ.– ಮುಖ್ಯಮಂತ್ರಿ ಸಿದ್ದರಾಮಯ್ಯ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತೀರ್ಮಾನದಂತೆ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಒಮ್ಮತದ ಅಭ್ಯರ್ಥಿ ಮೀರಾಕುಮಾರ್ ಅವರನ್ನು ಬೆಂಬಲಿಸಲು ಜೆಡಿಎಸ್ ನಿರ್ಧರಿಸಿದೆ.
– ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ. ರಾಷ್ಟ್ರಪತಿ ಚುನಾವಣೆಗೆ ಮೀರಾಕುಮಾರ್ ಯುಪಿಎ ನೇತೃತ್ವದ ಪ್ರತಿಪಕ್ಷಗಳ ಅಭ್ಯರ್ಥಿ. ಇಲ್ಲಿ ಯುಪಿಎ ಅಥವಾ ಎನ್‌ಡಿಎ ಬೆಂಬಲದ ಪ್ರಶ್ನೆ ಅಲ್ಲ. ಸೈದ್ದಾಂತಿಕ ನಿಲುವು ಉಳ್ಳುವರು ಮತ ಹಾಕುತ್ತಾರೆ.
-ಡಾ. ಎಂ. ವೀರಪ್ಪ ಮೊಯಿಲಿ, ಸಂಸದ. ರಾಷ್ಟ್ರಪತಿ ಚುನಾವಣೆ ಹಿನ್ನೆಲೆ. ರಾಜಕೀಯದಲ್ಲಿ ಕೊನೆ ಕ್ಷಣದವರೆಗೆ ಏನು ಬೇಕಾದರೂ ಆಗಬಹುದು. ಲಾಲುಪ್ರಸಾದ್ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಚರ್ಚೆ ಮಾಡುತ್ತಿದ್ದಾರೆ. ಅಲ್ಲದೇ ಮೀರಾಕುಮಾರ್ ಬಿಹಾರದ ಹೆಣ್ಣು ಮಗಳು, ಹಾಗಾಗಿ ನಿತೀಶ್‌ಕುಮಾರ್ ತಮ್ಮ ನಿಲುವು ಬದಲಾಯಿಸಬಹುದು. ಕೊನೆಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಎಲ್ಲ ಪ್ರತಿಪಕ್ಷಗಳು ಸೇರಿ ಮೀರಾಕುಮಾರ್ ಆವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ.
– ಡಿ.ಕೆ. ಶಿವಕುಮಾರ್, ಇಂಧನ ಸಚಿವ.