Advertisement
2017ರ ಜೂನ್ 18ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಮಧ್ಯಾಹ್ನದ ವೇಳೆ ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಐದನೇ ಪರ್ಯಾಯದ ಅವಧಿಯ ಕೊನೆಯ ಹಂತವಾಗಿತ್ತು, ಪ್ರಣವ್ ಅವರ ರಾಷ್ಟ್ರಪತಿ ಅವಧಿಯ ಕೊನೆಯ ಹಂತವೂ ಆಗಿತ್ತು.ಪ್ರಣವ್ ಅವರು ಉಡುಪಿಗೆ ಆಗಮಿಸಿ ರಾಷ್ಟ್ರಪತಿ ಸೇವೆಯನ್ನು “ಕೃಷ್ಣಾರ್ಪಣ’ ಮಾಡಿದ್ದಾರೆ. ಸಾಧು ಸಂತರಿಗೆ “ಪ್ರಣವ ಮಂತ್ರ’ (ಓಂಕಾರ) ಬಹಳ ವಿಶೇಷ. ರಾಷ್ಟ್ರಪತಿಗಳ ಹೆಸರೂ ಪ್ರಣವ. ಜಗತ್ಪತಿಯಾದ ಶ್ರೀಕೃಷ್ಣನ ದರ್ಶನವನ್ನು ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಪೇಜಾವರ ಶ್ರೀಗಳು ಬಣ್ಣಿಸಿದ್ದರು. ಜಗತ್ಪತಿಯ ದರ್ಶನ ಬಳಿಕ ಪ್ರಣವ್ ಅವರು ಕೊಲ್ಲೂರಿನ ಮೂಕಾಂಬಿಕೆಯ (ಜಗನ್ಮಾತೆ) ದರ್ಶನ ಪಡೆದರು.
Related Articles
ಸುಮಾರು 40 ವರ್ಷಗಳ ಹಿಂದೆ 1978ರಲ್ಲಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಕಾರ್ಕಳ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳು ಚಿಕ್ಕಮಗಳೂರು ಕ್ಷೇತ್ರದ ಭಾಗವೂ ಆದ ಕಾರಣ ಪ್ರಣವ್ ಈ ಭಾಗಗಳಲ್ಲಿ ಪ್ರಚಾರ ಭಾಷಣ ಮಾಡಿದ್ದರು. ಆಗ ಮಾಜಿ ಸಚಿವೆ ಮನೋರಮಾ ಮಧ್ವರಾಜ್, ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಮೊದಲಾದ ನಾಯಕರ ಜತೆ ಪ್ರವಾಸ ಮಾಡಿದ್ದರು. ಇವರಿಬ್ಬರ ಹೆಸರುಗಳನ್ನೂ ಪ್ರಣವ್ 2017ರ ಭೇಟಿ ಸಂದರ್ಭ ಉಲ್ಲೇಖೀಸಿದ್ದರು. ಮಧ್ಯಾಹ್ನ ಪ್ರವಾಸಿ ಮಂದಿರದಲ್ಲಿ ಭೋಜನ ಸ್ವೀಕರಿಸುವಾಗ ರಾಷ್ಟ್ರಪತಿಗಳ ಜತೆ ಆಸ್ಕರ್ ಮತ್ತು ಬ್ಲೋಸಂ ಫೆರ್ನಾಂಡಿಸ್ ಅವರೂ ಭೋಜನ ಸ್ವೀಕರಿಸಿದ್ದರು.
Advertisement
1980ರ ಲೋಕಸಭಾ ಚುನಾವಣೆಯ ವೇಳೆ ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದುದರ ಹಿಂದೆಯೂ ಪ್ರಣವ್ ಮುಖರ್ಜಿಯವರ ಪಾತ್ರ ಇತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಣವ್ 1979ರಲ್ಲಿ ಆಗಮಿಸಿದಾಗ ಹೊಟೇಲ್ ಮಲ್ಲಿಕಾದಲ್ಲಿ ಉಳಿದುಕೊಂಡಿದ್ದರು. ಆಗ ನಾನು ಮತ್ತು ಆಸ್ಕರ್ ಫೆರ್ನಾಂಡಿಸ್ ಅವರು ಮುಖರ್ಜಿಯವರನ್ನು ಭೇಟಿ ಮಾಡಿ ಮಾತನಾಡಿದ್ದೆವು. 1980ರ ಜನವರಿ 6ರಂದು ಚುನಾವಣೆ ನಡೆದು ಆಸ್ಕರ್ ಗೆಲುವು ಸಾಧಿಸಿದರು ಎಂಬುದನ್ನು ಸ್ಮರಿಸಿಕೊಳ್ಳುತ್ತಾರೆ ಮಾಜಿ ಶಾಸಕ ಯು.ಆರ್. ಸಭಾಪತಿ. ಅದೇ ದಿನ ಅವರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಬಿಆರ್‌ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈ.ಲಿ. ಪ್ರವರ್ತಿತ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ನೆರವೇರಿಸಿದ್ದರು.
ಮಣಿಪಾಲಕ್ಕೆ ಬಂದಿದ್ದ ಪ್ರಣವ್ಪ್ರಣವ್ ದೇಶದ ವಿತ್ತ ಸಚಿವರಾಗಿದ್ದಾಗ ಮಣಿಪಾಲದ ಮಾಹೆ ವಿ.ವಿ.ಗೆ ಭೇಟಿ ನೀಡಿದ್ದರು. ಮಣಿಪಾಲ್ ಸೆಂಟರ್ ಫಾರ್ ಏಷ್ಯನ್
ಸ್ಟಡೀಸ್ 2012ರ ಮೇ 26ರಂದು ಆಯೋಜಿ ಸಿದ “21ನೇ ಶತಮಾನ ಏಷ್ಯನ್ನರ ಶತಮಾನ: ಭಾರತ ಮತ್ತು ಚೀನದ ಪಾತ್ರ’ ಎಂಬ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಉದೊºàಧಕ ಉಪನ್ಯಾಸ ನೀಡಿದ್ದರು. ಅವರು ಮಣಿಪಾಲ ವಿ.ವಿ. ಆಡಳಿತ ಕಚೇರಿ ಮತ್ತು ಎಂಐಟಿಗೆ ಭೇಟಿ ನೀಡಿ ಎಂಐಟಿಯ ಅಕಾಡೆಮಿಕ್ ಬ್ಲಾಕನ್ನು ಉದ್ಘಾಟಿಸಿದ್ದರು. ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಪೈಯವರು ಗೌರವಿಸಿದ್ದರು. 21ನೇ ಶತಮಾನ ಏಷ್ಯನ್ನರ ಶತಮಾನವಾಗಲು ಬಡತನ, ಅಸಮಾನತೆಯಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಪ್ರಣವ್ ಹೇಳಿದ್ದರು.
ಬೆಳ್ತಂಗಡಿ: ಭಾರತದ ನೈತಿಕತೆಯನ್ನು ಉಳಿಸಿದ ಮೇರು ವ್ಯಕ್ತಿತ್ವ ಘನತೆವೆತ್ತ ಮಾಜಿ ರಾಷ್ಟ್ರಪತಿಯಾದ ಪ್ರಣವ್ ಮುಖರ್ಜಿ ಅವರದ್ದಾಗಿದೆ. ರಾಷ್ಟ್ರಪತಿಯಾಗುವ ಪೂರ್ವದಲ್ಲಿ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದು ಆಡಳಿತಾತ್ಮಕವಾಗಿ ಅಪಾರ ಅನುಭವ ಹೊಂದಿದ್ದರು. 2015ರಲ್ಲಿ ಅವರಿಂದ ನಾನು ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿರುವುದು ಸ್ಮರಣೀಯವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚನೆಯಲ್ಲಿ ತಿಳಿಸಿದ್ದಾರೆ. ಉಡುಪಿಗೆ ಬಂದ ಮೂರನೇ ರಾಷ್ಟ್ರಪತಿ
ಗ್ಯಾನಿ ಜೈಲ್‌ಸಿಂಗ್ (1986-87- ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರ ಪರ್ಯಾಯ), ಡಾ| ಶಂಕರ್ ದಯಾಳ್ ಶರ್ಮಾ (1992-93, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯ) ರಾಷ್ಟ್ರಪತಿಗಳಾಗಿದ್ದ ಅವಧಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು ಹೊರತುಪಡಿಸಿದರೆ, ಪ್ರಣವ್ ಮುಖರ್ಜಿ ಉಡುಪಿಗೆ ಭೇಟಿ ನೀಡಿದ ಮೂರನೇ ರಾಷ್ಟ್ರಪತಿ 2018ರ ಡಿಸೆಂಬರ್ 27ರಂದು ಉಡುಪಿಗೆ ಭೇಟಿ ನೀಡಿದ ನಾಲ್ಕನೇ ರಾಷ್ಟ್ರಪತಿ ರಾಮನಾಥ ಕೋವಿಂದ್.