Advertisement

January coup: ಮಾಜಿ ಅಧ್ಯಕ್ಷ ಬೋಲ್ಸನಾರೋ ಪ್ರಚೋದನೆ- ತನಿಖಾ ಸಮಿತಿಯ ಆರೋಪ

08:29 PM Oct 19, 2023 | Pranav MS |

ಬ್ರೆಜಿಲ್‌: ದೇಶದಲ್ಲಿ ಜನವರಿ 8ರಲ್ಲಿ ಆದ ದಂಗೆ ವಿಚಾರವಾಗಿ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸನಾರೊ ಅವರು ಜನರನ್ನು ಪ್ರಚೋದಿಸಿದ್ದಾರೆ ಎಂದು ಬ್ರೆಜಿಲ್‌ನ ಸಂಸತ್‌ ಸಮಿತಿ ಆರೋಪಿಸಿದೆ. ಅಲ್ಲದೆ ಈ ಕುರಿತ ತನಿಖೆ ಮುಂದುವರಿಸಿದೆ.

Advertisement

2022ರ ಚುನಾವಣೆಯಲ್ಲಿ ಎಡಪಂಥೀಯ ಅಧ್ಯಕ್ಷ ಲೂಯಿಸ್‌ ಇನಾಸಿಯೊ ಲುಲಾ ಡಾ ಸಿಲ್ವಾ ಮಾಜಿ ಅಧಕ್ಷ ಬೋಲ್ಸನಾರೋ ಅವರನ್ನು ಸೋಲಿಸಿದ್ದರು. ಬಳಿಕ 2023ರಲ್ಲಿ ಬೋಲ್ಸನಾರೋ ಅವರು ತಮ್ಮ ಬೆಂಬಲಿಗರಿಗೆ ಫೆಢರಲ್‌ ಸರ್ಕಾರಿ ಕಟ್ಟಡಗಳನ್ನು ಮುತ್ತಿಗೆ ಹಾಕುವಂತೆ ಕರೆ ನೀಡಿದ್ದರು ಎನ್ನಲಾಗಿದೆ. ಈ ಬೆನ್ನಲ್ಲೆ ಜೂ. 30ರವೇಳೆಗೆ ಸುಪೀರಿಯಲ್‌ ಕೋಟ್‌ ಬೋಲ್ಸನಾರೋ ಅವರ ಅಧಿಕಾರವನ್ನು ನಿರ್ಬಂಧಿಸಿತ್ತು.

ಈ ರಾಜಕೀಯ ಧ್ರುವೀಕರಣದ ಹಿನ್ನೆಲೆಯಲ್ಲಿ ಬ್ರೆಜಿಲ್‌ ಸರ್ಕಾರ ತನಿಖೆ ನಡೆಸುತ್ತಿದ್ದು, ಪ್ರಸ್ತುತ ದೇಶ ತೊರೆದಿರುವ ಬೋಲ್ಸನಾರೋ ವಿಚಾರಣೆ ವೇಳೆ ಇದು ಸಂಪೂರ್ಣ ಪಕ್ಷಪಾತ ಮತ್ತು ಅಸಂಬದ್ಧವಾದ ವರದಿಯಾಗಿದ್ದು, ಲೂಲಾ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್‌, ಸುಪ್ರೀಂಕೋರ್ಟ್‌ ಮತ್ತು ಅಧ್ಯಕ್ಷರ ಅರಮನೆಯನ್ನು ಮುತ್ತಿಗೆ ಹಾಕಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.

ಗಲಭೆಯಲ್ಲಿ ಲೂಲಾರನ್ನು ಕಚೇರಿಯಿಂದ ಹೊರಹಾಕಲು ಸಂಘಟಿತ ತಂಡ ಪ್ರಯತ್ನವೊಂದು ನಡೆದಿರುವುದಾಗಿ ತನಿಖೆಯಿಂದ ಊಹಿಸಲಾಗಿದ್ದು, ಬೋಲ್ಸನಾರೋ ಅವರಿಂದ ಆ ತಂಡ ಪ್ರಚೋದಿತವಾಗಿತ್ತು. ಅಲ್ಲದೆ ಅವರು ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next