Advertisement

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

08:13 PM Oct 15, 2021 | Team Udayavani |

ನವದೆಹಲಿ: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ದೆಹಲಿಯ ಏಮ್ಸ್‌ ಆಸ್ಪತ್ರೆ ತಿಳಿಸಿದೆ.

Advertisement

ಸಿಂಗ್‌ ಅವರಿಗೆ ಬುಧವಾರ ಜ್ವರ ಮತ್ತು ಸುಸ್ತು ಕಾಣಿಸಿಕೊಂಡಿದ್ದು, ಏಮ್ಸ್‌ಗೆ ದಾಖಲಿಸಲಾಗಿತ್ತು. ಅವರಿಗೆ ಆಸ್ಪತ್ರೆಯ ಕಾರ್ಡಿಯೋ ನ್ಯೂರೋ ಸೆಂಟರ್‌ನ ಖಾಸಗಿ ವಾರ್ಡ್‌ನಲ್ಲಿ ಡಾ.ನಿತೀಶ್‌ ನಾಯಕ್‌ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ.

ಅವರನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಗುರುವಾರ ಭೇಟಿ ಮಾಡಿದ್ದಾರೆ. ಹಾಗೆಯೇ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರೂ ಅವರ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 470 ಹೊಸ ಪ್ರಕರಣ ಪತ್ತೆ | 368 ಸೋಂಕಿತರು ಗುಣಮುಖ 

Advertisement

Udayavani is now on Telegram. Click here to join our channel and stay updated with the latest news.

Next