Advertisement

ಸಾರ್ವಜನಿಕ ಜೀವನಕ್ಕೆ ಮಾಜಿ PM ಮನಮೋಹನ್‌ ಸಿಂಗ್‌ ವಿದಾಯ?

11:43 PM Feb 09, 2024 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಸದ್ಯ ಅವರು ಹೊಂದಿರುವ ರಾಜ್ಯಸಭೆ ಸದಸ್ಯತ್ವದ ಅವಧಿ ಏ.2ರ ವರೆಗೆ ಇದೆ. ಇದೇ ಅವರ ಕೊನೆಯ ರಾಜ್ಯಸಭಾ ಅವಧಿಯಾಗಲಿದ್ದು, ಅನಾರೋಗ್ಯದ ಕಾರಣ ಅವರು ರಾಜಕೀಯ ಜೀವನದಿಂದ ನಿವೃತ್ತರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

1991ರಲ್ಲಿ ನರಸಿಂಹ ರಾವ್‌ ಸರಕಾರದ ಅವಧಿಯಲ್ಲಿ ವಿತ್ತ ಸಚಿವರಾಗಿ, ದೇಶದ ಅರ್ಥ ವ್ಯವಸ್ಥೆಗೆ ಹೊಸ ರೂಪ ಹೆಗ್ಗಳಿಕೆ ನೀಡಿದ್ದ ಹೆಗ್ಗಳಿಕೆ ಅವರದ್ದು. ಇದರ ಜತೆಗೆ ಯುಪಿಎ ಸರಕಾರದ ನೇತೃತ್ವದ ವಹಿಸಿ 2004-2014ರ ವರೆಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಮನಮೋಹನ್‌ ಸಿಂಗ್‌ ಅವರನ್ನು ರಾಜ್ಯಸಭೆಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮುಕ್ತ ಕಂಠದಿಂದ ಶ್ಲಾಘಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next