Advertisement

ಭ್ರಷ್ಟಾಚಾರ ಪ್ರಕರಣ; ಪಾಕ್ ಮಾಜಿ ಪ್ರಧಾನಿ ಷರೀಫ್ ಗೆ 10 ವರ್ಷ ಜೈಲು

05:16 PM Jul 06, 2018 | Team Udayavani |

ಇಸ್ಲಾಮಾಬಾದ್:ವಿದೇಶದಲ್ಲಿ ಅಕ್ರಮ ಹಣ, ಆಸ್ತಿ ಸೇರಿದಂತೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ನ್ಯಾಯಾಲಯ ಶುಕ್ರವಾರ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಎಎನ್ ಐ ವರದಿ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement

ನವಾಜ್ ಷರೀಫ್ ಪುತ್ರಿ ಮರ್ಯಮ್ ಷರೀಫ್ ಗೂ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿ ವಿವರಿಸಿದೆ.

ಪನಾಮಾ ಪೇಪರ್ಸ್ ಪ್ರಕರಣದಲ್ಲಿ ಷರೀಫ್ ಭ್ರಷ್ಟಾಚಾರ ಬಯಲುಗೊಂಡಿತ್ತು. ಇದರ ಬಳಿಕ ನವಾಜ್ ಷರೀಫ್ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next