Advertisement

Maheswar Mohanty: ಒಡಿಶಾ ವಿಧಾನಸಭೆಯ ಮಾಜಿ ಸ್ಪೀಕರ್ ಮಹೇಶ್ವರ್ ಮೊಹಾಂತಿ ನಿಧನ

08:20 AM Nov 08, 2023 | Team Udayavani |

ಭುವನೇಶ್ವರ್: ಒಡಿಶಾ ವಿಧಾನಸಭೆಯ ಮಾಜಿ ಸ್ಪೀಕರ್ ಮಹೇಶ್ವರ್ ಮೊಹಾಂತಿ ಮಂಗಳವಾರ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಸಚಿವರೂ ಆಗಿದ್ದ ಬಿಜೆಡಿ ನಾಯಕ ಮೊಹಂತಿ ಅವರಿಗೆ 67 ವರ್ಷ ವಯಸ್ಸಾಗಿತ್ತು. ಅವರು ಇಬ್ಬರು ಪುತ್ರರು ಮತ್ತು ಪತ್ನಿಯನ್ನು ಅಗಲಿದ್ದಾರೆ.

ಸೆರೆಬ್ರಲ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಅವರನ್ನು ನವೆಂಬರ್ 1 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂಗಳವಾರ ಮುಂಜಾನೆ 3:25 ಕ್ಕೆ ಅವರು ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಥೀವ ಶರೀರವನ್ನು ಸರ್ಕಾರಿ ಗೌರವಗಳೊಂದಿಗೆ ಪುರಿಯ ‘ಸ್ವರ್ಗದ್ವಾರ’ದಲ್ಲಿ ನಡೆಸಲಾಯಿತು.

ಮೊಹಾಂತಿ ಅವರು ಐದು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದರು, 1995 ರಲ್ಲಿ ಜನತಾ ದಳದ ಅಭ್ಯರ್ಥಿಯಾಗಿ ಮತ್ತು 2000, 2004, 2009 ಮತ್ತು 2014 ರಲ್ಲಿ ಬಿಜೆಡಿ ನಾಮನಿರ್ದೇಶಿತರಾಗಿ ಚುನಾಯಿತರಾಗಿದ್ದರು.

Advertisement

ವೃತ್ತಿಯಲ್ಲಿ ವಕೀಲರಾಗಿರುವ ಅವರು ವಿಧಾನಸಭೆಗೆ ಆಯ್ಕೆಯಾಗುವ ಮೊದಲು ಎರಡು ಬಾರಿ ಪುರಿ ಪುರಸಭೆಯ ಅಧ್ಯಕ್ಷರಾಗಿದ್ದರು. ಅಲ್ಲದೆ ನವೀನ್ ಪಟ್ನಾಯಕ್ ಸರ್ಕಾರದಲ್ಲಿ, ಅವರು 2011 ಮತ್ತು 2019 ರ ನಡುವೆ ಪಂಚಾಯತ್ ರಾಜ್, ಕಂದಾಯ, ಕಾನೂನು ಮತ್ತು ಪ್ರವಾಸೋದ್ಯಮದಂತಹ ಖಾತೆಗಳನ್ನು ಹೊಂದಿದ್ದರು. ಅವರು 2004 ರಿಂದ 2008 ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿದ್ದರು.

ರಾಜ್ಯಪಾಲ ರಘುಬರ್ ದಾಸ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಛತ್ತೀಸ್‌ಗಢ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಸೇರಿದಂತೆ ಪ್ರಮುಖರು ಮೊಹಾಂತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂಓದಿ: Horoscope Today: ಎಂತಹ ಆಪತ್ತನ್ನೂ ಎದುರಿಸುವ ಧೈರ್ಯವೇ ನಿಮಗೆ ರಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next