Advertisement

ಏಳು ದಿನಗಳ ಒಳಗೆ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಮಾಜಿ ಸಂಸದರಿಗೆ ಸೂಚನೆ

08:24 AM Aug 20, 2019 | keerthan |

ದೆಹಲಿ: ಎಲ್ಲಾ ಮಾಜಿ ಸಂಸದರು ಏಳು ದಿನಗಳ ಒಳಗೆ ದೆಹಲಿಯಲ್ಲಿ ತಮಗೆ ನೀಡಿರುವ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡಬೇಕೆಂದು ವಸತಿ ಸಮಿತಿಯ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸೂಚಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಮಾಜಿ ಸಂಸದರಿಗೆ ಸರ್ಕಾರಿ ವಸತಿಗಳನ್ನು ತ್ಯೆಜಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಮೂರು ದಿನಗಳ ಒಳಗೆ ವಿದ್ಯುತ್ ಮತ್ತು ನೀರಿನ ಸರಬರಾಜು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾನೂನಿನ ಪ್ರಕಾರ, ಸಂಸದರು ಮರು ಆಯ್ಕೆಗೊಳ್ಳದೆ ಇದ್ದರೆ 30 ದಿನಗಳಲ್ಲಿ ತಮಗೆ ನೀಡಿರುವ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡಬೇಕು. ಕನಿಷ್ಠ 50 ರಿಂದ 60 ಮಾಜಿ ಸಂಸದರು ತಮಗೆ ನೀಡಿರುವ ವಸತಿ ಗೃಹಗಳನ್ನು ಇನ್ನೂ ಕೂಡ ಖಾಲಿ ಮಾಡಿಲ್ಲವೆಂದು ತಿಳಿಸಿದರು.

16ನೇ ಲೋಕಸಭೆ ವಿಸರ್ಜನೆಯಾಗಿ ಮೂರು ತಿಂಗಳು ಕಳೆದರೂ ಸಹ ಹಲವಾರು ಸಂಸದರು ತಮಗೆ ನೀಡಿರುವ ವಸತಿ ಗೃಹಗಳನ್ನು ತೆರವುಗೊಳಿಸಿಲ್ಲ.

ನವದೆಹಲಿ ನಾರ್ಥ್ ಅವೆನ್ಯೂನಲ್ಲಿರುವ ಲೋಕಸಭಾ ಸಚಿವಾಲಯದ ಡ್ಯುಫ್ಲೆಕ್ಸ್ ಫ್ಲಾಟ್ ಗಳ ಉದ್ಘಾಟನ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತಿನ ಹೊಸ ಅಧಿವೇಶನ ಆರಂಭವಾದಗ ಹೊಸ ಸಂಸದರು ವಸತಿ ಗೃಹಗಳನ್ನು ಹುಡುಕಲು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next