Advertisement
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. ಎಲ್ಲಾ ರಂಗಗಳಲ್ಲೂ ನಿರ್ಜೀವವಾಗಿದೆ. ಏನಾದರೂ ಸಕ್ರಿಯವಾಗಿದ್ದರೇ ಅದು ಹಣ ಲೂಟಿ ಮಾಡುವುದಲ್ಲಿ ಮಾತ್ರ ಎಂದು ಹೇಳಿದರು.
Related Articles
Advertisement
ಸಂವಿಧಾನಕ್ಕೆ ನೀಡಿಲ್ಲ ಬೆಲೆ: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಅವರ ಮೇಲಿನ ಸೇಡಿಗಾಗಿ ಅಸಂಸದೀಯ ಪದ ಬಳಕೆ ಮಾಡಿ, ಕ್ರಿಮಿನಲ್ ಕೇಸು ಹಾಕಿಸಿಕೊಂಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗಂಭೀರ ಆರೋಪವಿದ್ದರೂ ಸಂವಿಧಾನಕ್ಕೆ ಬೆಲೆ ನೀಡದೆ, ಸಾರ್ವಜನಿಕರ ನಂಬಿಕೆಗೆ ಬೆಲೆ ನೀಡದೆ, ಆರೋಪ ಬಂದ ತಕ್ಷಣ ರಾಜೀನಾಮೆ ನೀಡದೆ, ಅಧಿಕಾರದಲ್ಲಿ ಮುಂದುವರಿದಿರುವ ಏಕೈಕ ರಾಜಕಾರಣಿ ಎಂದರೆ ಸುಧಾಕರ್ ಎಂದು ವ್ಯಂಗ್ಯವಾಡಿದರು.
ಎಚ್‌ಡಿಕೆಯಿಂದ ದ್ವಂದ್ವ ಹೇಳಿಕೆ: ಮಾಜಿ ಪ್ರಧಾನಿ ದೇವೇಗೌಡರ ಕಾಲದಿಂದ ಕುಮಾರಸ್ವಾಮಿಯನ್ನು ನಾನು ಬಲ್ಲೆ. ಸಮ್ಮಿಶ್ರ ಸರ್ಕಾರ ಪತನವಾಗಲು ಬಿಜೆಪಿ, ಯಡಿಯೂರಪ್ಪ ಕಾರಣ ಎಂದು ವಿಧಾನಸಭೆಯಲ್ಲಿ ಕುಮಾರಸ್ವಾಮಿ ಹೇಳಿಕೆ ಕಡತದಲ್ಲಿ ದಾಖಲಾಗಿದೆ. ಈಗ ಇದನ್ನು ಸಿದ್ದರಾಮಯ್ಯ ಕಾರಣ, ಕಾಂಗ್ರೆಸ್ ಬಿಜೆಪಿಯ ಬಿ ಟೀಂ ಎಂದು ದೂರುವುದು ಎಷ್ಟು ಸರಿ. ಹಾಗಾದರೆ, ಕುಮಾರಸ್ವಾಮಿ ಅವರ ಎರಡೂ ಹೇಳಿಕೆಗಳಲ್ಲಿ ಯಾವುದು ಸರಿ ಎಂದು ಪ್ರಶ್ನಿಸಿದರು. ತೇಜೋವಧೆ ತಪ್ಪು: ರಾಜಕಾರಣಕ್ಕಾಗಿ ರಾಜಕಾರಣಿಗಳ ತೇಜೋವಧೆ ತಪ್ಪು. ನಿಮ್ಮ ಕುಟುಂಬಕ್ಕೆ ಒಂದು ಇತಿಹಾಸ ಇದೆ. ಅದನ್ನು ಹಾಳು ಮಾಡಬೇಡಿ, ಗೂಬೆ ಕೂರಿಸುವ ಸಮಯ ಸಾಧಕತನ ಬಿಡಬೇಕು, ದೇವೇಗೌಡರ ಕುಟಂಬದ ಮೇಲೆ ಗೌರವವಿದೆ. ಅದಕ್ಕೆ ಧಕ್ಕೆ ಬರದಂತೆ ನಡೆಯಿರಿ ಸಲಹೆ ನೀಡಿದರು.
ಕೇಂದ್ರ ಮಧ್ಯಪ್ರವೇಶ ಮಾಡಲಿ: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರವು ಸುಮ್ಮನೆ ಮೂಗು ತೂರಿಸುವುದನ್ನು ಬಿಡಬೇಕು. ಕರ್ನಾಟಕದ ಸಿಎಂ ನಮ್ಮದು ಡಬಲ್ ಎಂಜಿನ್ ಸರ್ಕಾರ ಎನ್ನುತ್ತಾರೆ. ಪ್ರಧಾನಿಗಳಿಂದ ಮಹಾರಾಷ್ಟ್ರದವರಿಗೆ ತಿಳಿ ಹೇಳಿಸಬೇಕು, ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕು, ನೆಲ, ಜಲ, ಭಾಷೆ, ಸಂಸ್ಕೃತಿ ಮೇಲೆ ಯಾರು ದಾಳಿ ಮಾಡಿದರೂ, ಕಾಂಗ್ರೆಸ್ ಅದನ್ನು ಖಂಡಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್‌ಎಂ.ಮುನಿಯಪ್ಪ, ಶಿವಾನಂದ, ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ನದಿ ಆಂಜಿನಪ್ಪ, ಯಲುವಹಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣಸ್ವಾಮಿ, ಲಾಯರ್ ನಾರಾಯಣಸ್ವಾಮಿ, ಜಯರಾಂ, ಕೃಷ್ಣಪ್ಪ, ಮಂಚೇನಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.
ಅಡ್ಡಮತದಾನ ಮಾಡಿದವರ ಸೇರ್ಪಡೆ ಬಗ್ಗೆ ಪರಿಶೀಲಿಸುತ್ತೇವೆ : ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಸದಸ್ಯರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಪಕ್ಷದ ಶಿಸ್ತು ಸಮಿತಿ ಪರಿಶೀಲಿಸುತ್ತದೆ. ನಗರಸಭಾ ಸದಸ್ಯರಿಂದ ಸೂಕ್ತ ಉತ್ತರ ಬಂದಿಲ್ಲ ಎಂದರೇ ಕ್ರಮ ಜರುಗಿಸಲಾಗುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಸ್ಪಷ್ಟಪಡಿಸಿದರು.