Advertisement

ಮಾಜಿ ಸಂಸದ,ಮಾಜಿ ಸಚಿವ ವಿಜಯ್‌ಶಂಕರ್‌ ಬಿಜೆಪಿಗೆ ಗುಡ್‌ಬೈ?

04:40 PM Oct 05, 2017 | Team Udayavani |

ಮೈಸೂರು: ಕುರುಬ ಸಮುದಾಯದ ನಾಯಕ, ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್‌.ವಿಜಯ್‌ ಶಂಕರ್‌ ಅವರು ಬಿಜೆಪಿ ತೊರೆಯುವ ನಿರ್ಧಾರ ತಳೆದಿದ್ದಾರೆ ಎಂದು ಕೆಲ ಮೂಲಗಳು ವರದಿ ಮಾಡಿವೆ. 

Advertisement

ಪಕ್ಷದ ನಾಯಕರು ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಕಡೆಗಣನೆಯಿಂದ ತೀವ್ರವಾಗಿ ಬೇಸತ್ತಿರುವ ವಿಜಯ್‌ ಶಂಕರ್‌ ಅವರು ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಹುಣಸೂರಿನಿಂದ 1994 ,98 ರಲ್ಲಿ 2 ಬಾರಿ ಶಾಸಕರಾಗಿದ್ದ ವಿಜಯಶಂಕರ್‌ ಅವರು ಮೈಸೂರು ಕ್ಷೇತ್ರದಿಂದ 2004 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರನ್ನು ಮಣಿಸಿ 12 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 

2010 ರಿಂದ 2016 ರವರೆಗೆ ವಿಧಾನಪರಿಷತ್‌ ಸದಸ್ಯರಾಗಿದ್ದರು. ಜಗದೀಶ್‌ ಶೆಟ್ಟರ್‌ ಅವರ ಸಂಪುಟದಲ್ಲಿ ಅರಣ್ಯ ಮತ್ತು ಪರಿಸರ ಖಾತೆಯನ್ನು ನಿರ್ವಹಿಸಿದ್ದರು.

2009 ರ ಲೋಕಸಭಾ ಚುನಾವಣೆಯಲ್ಲಿ ಎಚ್‌.ವಿಶ್ವನಾಥ್‌ ಅವರ ವಿರುದ್ದ ಪರಾಜಿತರಾಗಿದ್ದರು.  

Advertisement

2014 ರ ಲೋಕಸಭಾ ಚುನಾವಣೆಗೆ ಮೈಸೂರು ಕ್ಷೇತ್ರದ ಟಿಕೇಟ್‌ ತಪ್ಪಿಸಿ ಹಾಸನದಿಂದ ಕಣಕ್ಕಿಳಿಸಲಾಗಿತ್ತು. ಈ ವಿದ್ಯಮಾನ ವಿಜಯ್‌ಶಂಕರ್‌ಗೆ ನೋವು ತರಿಸಿತ್ತಾದರೂ ಪರಿಷತ್‌ ಸದಸ್ಯರಾಗಿ ಮುಂದುವರಿದಿದ್ದರು. 

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಿರಿಯಾರಪಟ್ಟಣ ಟಿಕೇಟ್‌ ಆಕಾಂಕ್ಷಿಯಾಗಿರುವ ಅವರಿಗೆ ಟಿಕೇಟ್‌ ಸಿಗುವ ಸಾಧ್ಯತೆಗಳು ಕ್ಷಿಣವಾದ ಹಿನ್ನಲೆಯಲ್ಲಿ ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. 

ವಿಜಯ್‌ಶಂಕರ್‌ ಪಕ್ಷ ತೊರೆದದ್ದೇ ಆದಲ್ಲಿ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೊಡೆತವಾಗುವ ಎಲ್ಲಾ ಸಾಧ್ಯತೆಗಳಿವೆ. 

ವಿಧಾನ ಸಭಾ ಚುನಾವಣೆ ತಯಾರಿ ವೇಳೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ಮೂರೂ ಪ್ರಮುಖ ಪಕ್ಷಗಳಲ್ಲಿ ಭಿನ್ನಮತ ಭುಗಿಲೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next