Advertisement

ತಾಂಡ ನಿವಾಸಿಗಳನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ: ಎಚ್.ಆರ್.ಶ್ರೀನಾಥ 

05:54 PM Mar 05, 2022 | Team Udayavani |

ಗಂಗಾವತಿ: ತಾಲೂಕಿನ ವಿರೂಪಾಪೂರ, ಸಂಗಾಪೂರ, ಮಲ್ಲಾಪೂರ ಮತ್ತು ಸೂರ್ಯನಾಯಕನ ತಾಂಡಗಳಲ್ಲಿ ಕಳೆದ 100 ವರ್ಷಗಳಿಂದ ವಾಸ ಮಾಡುತ್ತಿರುವ ಬುಡಕಟ್ಟು ಲಮಾಣಿ  ಜನಾಂಗದವರ ಮನೆಗಳನ್ನು ತೆರವುಗೊಳಿಸಿ ಒಕ್ಕಲೆಬ್ಬಿಸುವ ಕಾರ್ಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿದರೆ ಶಾಸಕರು ಮತ್ತು ಸರಕಾರದ ವಿರುದ್ಧ ತಾವು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮಾಡುವುದಾಗಿ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ಅವರು ತಮ್ಮ ನಿವಾಸದಲ್ಲಿ ತಾಲೂಕಿನ ವಿವಿಧ ತಾಂಡಗಳ ಲಮಾಣಿ ಜನಾಂಗದವರು ಅರಣ್ಯ ಇಲಾಖೆಯವರ ದೌರ್ಜನ್ಯ ಖಂಡಿಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಮಾಣಿ, ವಾಲ್ಮೀಕಿ, ಕುರುಬರು, ಗೊಲ್ಲ ಜನಾಂಗ ಮತ್ತು ಕಬ್ಬೇರ್ ಜನಾಂಗದವರು ಪ್ರಕೃತಿಯ ಮಕ್ಕಳಾಗಿದ್ದಾರೆ. ಇವರು ಅರಣ್ಯ, ಗುಡ್ಡಗಾಡು ನದಿ ಇವರ ಜೀವನದ ದಾರಿಯಾಗಿದೆ. ಶತಮಾನಗಳಿಂದ ಅಲ್ಲೇ ವಾಸ ಮಾಡುತ್ತಿದ್ದು ಕೆಲವು ಕಂದಾಯ ಗ್ರಾಮಗಳಾಗಿದ್ದರೆ. ಲಮಾಣಿ ತಾಂಡಗಳು ಮತ್ತು ಆಂಧ್ರ ಕ್ಯಾಂಪ್‌ಗಳು ಇನ್ನೂ ಕಂದಾಯ ಗ್ರಾಮಗಳಾಗಿಲ್ಲ. ಇದನ್ನೆ ನೆಪವಾಗಿಟ್ಟುಕೊಂಡು ಅರಣ್ಯ ಇಲಾಖೆಯವರು ಲಮಾಣಿ ಜನಾಂಗದವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಸರಕಾರ ಕೂಡಲೇ ಗ್ರಾಮ ಅರಣ್ಯ ಸಮೀತಿ ಮೂಲಕ ಮನೆ ಮತ್ತು ಉಳುವ ಭೂಮಿಗೆ ಹಕ್ಕು ಪತ್ರ ವಿತರಿಸಬೇಕು. ಇಲ್ಲದಿದ್ದರೆ ನಿರಾಶ್ರಿತ ಜತೆಗೂಡಿ ಸರಕಾರದ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕಿನ ವಿರೂಪಾಪೂರ, ಸಂಗಾಪೂರ, ಮಲ್ಲಾಪೂರ ಮತ್ತು ಸೂರ್ಯನಾಯಕನ ತಾಂಡಗಳ ನಿವಾಸಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next