Advertisement

ಕಾರ್ಮಿಕರ ಮುಷ್ಕರಕ್ಕೆ ಮಾಜಿ ಶಾಸಕ ಕೆ.ವೆಂಕಟೇಶ್ ಬೆಂಬಲ

12:30 PM Jul 09, 2022 | Team Udayavani |

ಪಿರಿಯಾಪಟ್ಟಣ: ತಾಲ್ಲೂಕಿನ ಸೀಗೂರು ಗ್ರಾಮದಲ್ಲಿ ಗಣೇಶ್ ಸ್ಪಿನರ್ಸ್ ಕಾರ್ಖಾನೆಯ ಕಾರ್ಮಿಕರು ನಡೆಸುತ್ತಿರುವ ಮುಷ್ಕರದ ಸ್ಥಳಕ್ಕೆ ಮಾಜಿ ಶಾಸಕ ಕೆ.ವೆಂಕಟೇಶ್ ಭೇಟಿ ನೀಡಿ ಕಾರ್ಮಿಕರಿಂದ ಅಹವಾಲು ಸ್ವೀಕರಿಸಿದರು.

Advertisement

ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು ಏಕಾಏಕಿ ಕಾರ್ಖಾನೆ ಮುಚ್ಚಿರುವುದು ಸರಿಯಲ್ಲ ಇದರಿಂದ ಅನೇಕ ಕುಟುಂಬಗಳು ತೊಂದರೆ ಅನುಭವಿಸಿದಂತಾಗುತ್ತದೆ.  ಕಾರ್ಖಾನೆ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿಸಲಾಗುವುದು ಮತ್ತು ಈ ಬಗ್ಗೆ ಸರಕಾರದ ವಿರೋಧ ಪಕ್ಷದ ನಾಯಕರು ಹಾಗೂ  ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ಗಮನಕ್ಕೆ ತಂದು ಸಂಬಂಧ ಪಟ್ಟ ಸಚಿವರು ಹಾಗೂ ರಾಜ್ಯ ಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ಹೊಲದಪ್ಪ ಮುಖಂಡರಾದ ಪುಟ್ಟರಾಜು, ಈರೇಗೌಡ, ಮತ್ತಿತರರು ಹಾಜರಿದ್ದರು

 

Advertisement

Udayavani is now on Telegram. Click here to join our channel and stay updated with the latest news.

Next