Advertisement

ಅವಳಿ ಜಿಲ್ಲೆಯಲ್ಲಿ ಜೆಡಿಎಸ್‌ ಅಲೆ: ಬಚ್ಚೇಗೌಡ

04:01 PM Dec 05, 2022 | Team Udayavani |

ಚಿಕ್ಕಬಳ್ಳಾಪುರ: ಕುಮಾರಣ್ಣ ನೇತೃತ್ವದಲ್ಲಿ ನಡೆಯುತ್ತಿರುವ ಪಂಚ ರತ್ನ ರಥಯಾತ್ರೆಯಿಂದ ಅವಳಿ ಜಿಲ್ಲೆಯಲ್ಲಿ ಜೆಡಿಎಸ್‌ ಅಲೆ ಎದ್ದಿದೆ. ಅನ್ಯ ಪಕ್ಷಗಳ ನಾಯಕರು ಜೆಡಿಎಸ್‌ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಹೇಳಿದರು.

Advertisement

ತಾಲೂಕಿನ ನಂದಿಯಲ್ಲಿ ಪಂಚರತ್ನ ಯೋಜನೆಗಳು ಮತ್ತು ಜೆಡಿಎಸ್‌ ಪಕ್ಷದ ಸಾಧನೆ ಒಳಗೊಂಡ ಎಲ್‌ಇಡಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡದ ಅವಧಿಯಲ್ಲಿ ಜಾರಿಗೊಳಿಸಿರುವ ನೀರಾವರಿ ಯೋಜನೆಗಳನ್ನು ರಾಜ್ಯದ ಜನರು ಇನ್ನೂ ಮನಸ್ಸಲ್ಲಿ ಇಟ್ಟುಕೊಂಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಣ್ಣ ನೇತೃತ್ವದಲ್ಲಿ ಮತ್ತೂಮ್ಮೆ ಜೆಡಿಎಸ್‌ ಪಕ್ಷ ಬಹುಮತದಿಂದ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರಲ್ಲಿ ಆಶಾ ಭಾವನೆ: ಜಿಲ್ಲಾಧ್ಯಕ್ಷ ಕೆ.ಎಂ. ಮುನೇಗೌಡ ಮಾತನಾಡಿ, ಕುಮಾರಣ್ಣ ನಡೆಸಿದ ಪಂಚರತ್ನ ಯೋಜನೆಗಳ ಮೂಲಕ ರೈತರು, ಯುವ ಜನರು, ಮಹಿಳೆಯರಲ್ಲಿ ಆಶಾಭಾವನೆ ಮೂಡಿದೆ. ಕುಮಾರಣ್ಣ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ, ಬರ ಮಾಡ್ಕೊಂಡಿ ದ್ದರು. ಕರ್ನಾಟಕದಲ್ಲಿ ಕುಮಾರಣ್ಣ ನೇತೃತ್ವ ದಲ್ಲಿ ಜನಪರ ಸರ್ಕಾರ ರಚನೆಯಾಗಲಿದೆ. ವಿಧಾನಸಭೆ ಚುನಾವಣೆ ಬರುವ ತನಕ ಕ್ಷೇತ್ರಾದ್ಯಂತ ಎಲ್‌ಇಡಿ ವಾಹನ ಸಂಚರಿಸಲಿದ್ದು, ಪ್ರತಿ ಹಳ್ಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರ ಸ್ವಾಮಿ ಅವಧಿಯಲ್ಲಿ ಜಾರಿಗೊಳಿಸಿರುವ ಜನಪರ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ರಾಜಾಕಾಂತ್‌, ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ತಾಲೂಕು ಅಧ್ಯಕ್ಷ ಮುನಿರಾಜು, ನಗರಸಭಾ ಉಪಾಧ್ಯಕ್ಷೆ ವೀಣಾ ರಾಮು, ಕೆ.ಅರ್‌.ರೆಡ್ಡಿ, ಜಫ್ರುಲ್ಲಾ, ಸಾದಿಕ್‌ ಪಾಷಾ, ಚನ್ನಕೃಷ್ಣಪ್ಪ, ಅಣ್ಣೆಮ್ಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next