ಕೊರಟಗೆರೆ: ಬಿಜೆಪಿ ಪಕ್ಷದ ಮಾಜಿ ಶಾಸಕ ಗಂಗಹನುಮಯ್ಯ, ಮಾಜಿ ಜಿ.ಪಂ.ಸದಸ್ಯೆ ಕಮಲ ಗಂಗಹನುಮಯ್ಯ ಮತ್ತು ಕೊರಟಗೆರೆ ತಾಲೂಕು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದ, ಚಲನ ಚಿತ್ರನಟ ಜಟ್ಟಿಅಗ್ರಹಾರ ನಾಗರಾಜು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ 2018 ರಲ್ಲಿ ಸ್ಪರ್ಧಿಸಿ ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗಿಂತ ಅತಿ ಹೆಚ್ಚು ಮತ ಪಡೆದು ಅಲ್ಪಮತಗಳಿಂದ ಪರಾಭವಗೊಂಡಿದ್ದು ಈ ಬಾರಿ ಪಕ್ಷದಿಂದ ಸ್ಪರ್ದಿಸಲು ಟಿಕೆಟ್ ಆಕಾಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರೂ ಪಕ್ಷದ ವರಿಷ್ಟರು ಟಿಕೆಟ್ ನೀಡುವ ಭರವಸೆ ನೀಡಿದ್ದು ನಂತರ ಟಿಕೆಟ್ ನೀಡದೆ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿ ಮೋಸ ಮಾಡಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡು ನಾನು ಮತ್ತು ನನ್ನ ಪತ್ನಿ ಮಾಜಿ ಜಿ.ಪಂ ಸದಸ್ಯೆ ಕಮಲ ಗಂಗಹನುಮಯ್ಯ ಸೇರಿದಂತೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಬಿಜೆಪಿ ಪಕ್ಷ ತೊರೆದು ಸಜ್ಜನಿಕೆಯ ರಾಜಕಾರಣಿ ಹಾಗೂ ಅಭಿವೃದ್ದಿಯ ಹರಿಕಾರ ಡಾ.ಜಿ.ಪರಮೇಶ್ವರ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಮುಂಬರಲಿರುವ ಮೇ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಾಮಾಣಿಕವಾಗಿ ದುಡಿದು ಡಾ.ಜಿ.ಪರಮೇಶ್ವರ ರವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಇದನ್ನೂ ಓದಿ:
Karnataka Election ಶೃಂಗೇರಿಯಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬದಿಂದ ಚಂಡಿಕಾಯಾಗ
ಕೊರಟಗೆರೆ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಜಟ್ಟಿ ಅಗ್ರಹಾರ ನಾಗರಾಜ್ ಮತ್ತು ಕ್ಷೇತ್ರದ 324 ಬೂತ್ ಮಟ್ಟದ ಸದಸ್ಯರು ಸಮಾಜವಾದಿ ಪಕ್ಷಕ್ಕೆ ಸಾಮೂಹಿವಾಗಿ ರಾಜೀನಾಮೆ ನೀಡಿ ಬೆಂಗಳೂರು ಕೆಪಿಸಿಸಿ ಕಛೇರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಮತ್ತು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಬಳಿಕ ಮಾತನಾಡಿದ ಜಟ್ಟಿ ಅಗ್ರಹಾರ ನಾಗರಾಜ್, ಕ್ಷೇತ್ರದ ಎಲ್ಲಾ ಹೋಬಳಿ ಮಟ್ಟದ ಬೂತ್ ಕಮಿಟಿಗಳನ್ನು ರಚಿಸಿ ಅನೇಕ ಶಿಬಿರಗಳನ್ನು ಮಾಡಿ ಸಾಮಾನ್ಯಜನತೆಯಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿ ಅನೇಕ ಜನಪರ ಕೆಲಸಗಳನ್ನು ಮಾಡಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ತಳಮಟ್ಟದಿಂದಲೂ ಪಕ್ಷದ ಸಂಘಟನೆ ಮಾಡಿದ್ದೇನೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯವರ ನಡವಳಿಕೆ ಬಗ್ಗೆ ಬೇಸತ್ತು, ಪಕ್ಷಕ್ಕೆ ಮತ್ತು ಅಧ್ಯಕ್ಷ ಸ್ಥಾನಕ್ಕೆ ನಾನು ಮತ್ತು ಬೂತ್ ಮಟ್ಟದ ಸದಸ್ಯರು ರಾಜೀನಾಮೆ ನೀಡಿದ್ದು ಇಂದು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಸಜ್ಜನ ರಾಜಕಾರಣಿ ಡಾ.ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಕೆಲಸ ಮಾಡಲು ನಾನು ಮತ್ತು ಬೂತ್ ಪಟ್ಟದ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದು ಡಾ.ಜಿ.ಪರಮೇಶ್ವರ ರವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.