ಕುಷ್ಟಗಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮಧ್ಯರಾತ್ರಿ ಮತದಾರರಿಗೆ ಹಣ ಹಂಚುವುದು ಕತಲ್ ರಾತ್ರಿ ಸಂಸ್ಕೃತಿ ಕಾಂಗ್ರೆಸ್ಸಿನದ್ದು ಎಂದೇ ಬಿಂಬಿತವಾಗಿದೆ. ಬಿಜೆಪಿಯ ಕೆಲಸ ಕಾರ್ಯಗಳನ್ನು ನೋಡಿ ಮತ ಚಲಾವಣೆಯಾಗಲಿದ್ದು, ನಮ್ಮ ಪಕ್ಷದಿಂದ ಬೆಳ್ಳಿ, ಬಂಗಾರ, ನಾಣ್ಯ ಇದ್ಯಾವುದು ಹಂಚಿಕೆ ಇಲ್ಲವೇ ಇಲ್ಲ. ಬಂಗಾರ ಕೊಟ್ಟರೆ ಇಲ್ಲ ಎನ್ನುವುದಿಲ್ಲ ತೆಗೆದುಕೊಳ್ತೇವೆ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.
ಇಲ್ಲಿನ ಎ.ಎಚ್. ಪಲ್ಲೇದ್ ವಕೀಲರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಅಭ್ಯರ್ಥಿ ಎಷ್ಟು ಖರ್ಚು ಮಾಡಬೇಕೋ ಅಷ್ಟನ್ನು ಖರ್ಚು ಮಾಡುವುದು ಅನಿವಾರ್ಯವಾಗಿದೆ. ಹಣ ಎಲ್ಲದಕ್ಕೂ ಕಾರಣವಾಗುದಿಲ್ಲ ಹಾಗಾದರೆ ದುಡ್ಡು ಇರುವ ಟಾಟಾ, ಬಿರ್ಲಾ, ಅಂಬಾನಿ ದೇಶದ ಪ್ರಧಾನಿಯಾಗಬಹುದಿತ್ತುಲ್ಲವೇ? ಪ್ರಶ್ನಿಸಿದರು.
ಚುನಾವಣೆಗಳಲ್ಲಿ ಜಾತಿ, ಆಮಿಷವೊಡ್ಡುವುದು ಕಾಂಗ್ರೆಸ್ಸನಲ್ಲಿದೆ:
ಸ್ಥಳೀಯ ಸಂಸ್ಥೆಗಳಿಂದ ಘನತೆ ಗೌರವಗಳಿಂದ ಸಂವಿಧಾನಿಕ ಮಹತ್ವದ ಹಿನ್ನೆಲೆಯಲ್ಲಿ ಮೇಲ್ಮನೆಯ ಘನತೆ ಹೆಚ್ಚಿಸಲು ಸಜ್ಜನ ಅವಶ್ಯಕತೆ ಇದೆ. ನಮ್ಮ ಅಭ್ಯರ್ಥಿ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸ್ವಭಾವತಃ ಒರಟು. ಸದರಿ ಅಭ್ಯರ್ಥಿ ಯ ಅಬ್ಬಗಡ ಕೆಲಸಗಳು ಬಹಳಷ್ಟಿವೆ. ದೊಡ್ಡವರು ಸಣ್ಣವರೆನ್ನುವ ವ್ಯತ್ಯಾಸ ಗೊತ್ತಿಲ್ಲ. ದೇಶದ ಪ್ರಧಾನಿಗೆ ಏಕ ವಚನದಲ್ಲಿ ಮಾತನಾಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ವ್ಯಕ್ತಿತ್ವ ತೋರಿಸಿದೆ. ಸಾರ್ವಜನಿಕ ಸಭೆಯಲ್ಲಿ ಹೇಗೆ ಮಾತನಾಡುತ್ತಾರೆನ್ನುವುದೇ ಗೊತ್ತಿಲ್ಲ. ಇನ್ನು ಬುದ್ದಿ ಜೀವಿಗಳ ಮೇಲ್ಮನೆ ಇನ್ನು ಹೇಗೆ ಮಾತನಾಡಬಹುದು? ಅಲ್ಲಿ ಹಿಡಿ, ಹೊಡಿ, ಬಡಿ, ಕಡಿ ಸಂಸ್ಕೃತಿ ನಡೆಯದು.
ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸದಸ್ಯರಾಗಿದ್ದ ಬಸವರಾಜ ಪಾಟೀಲ ಇಟಗಿ ಒಮ್ಮೆಯೂ ಸದನದಲ್ಲಿ ಧ್ವನಿ ಎತ್ತಲಿಲ್ಲ ಸ್ಥಳೀಯ ಸಂಸ್ಥೆಗಳ ಬಗ್ಗೆ ಸದನದಲ್ಲಿ ಚಕಾರವೆತ್ತಲಿಲ್ಲ. ಬಿಜೆಪಿಯಲ್ಲಿ Forwards v/s Backwards ಚುನಾವಣೆ ಎಂದೇ ಪ್ರಚಾರ ಮಾಡುತ್ತಿದ್ದು ಅದು ಹಾಗೆ ಅಲ್ಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನೇರ ಚುನಾವಣೆಯಾಗಿದೆ ಎಂದರು. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರನ್ನು ಸ್ಥಳೀಯರಲ್ಲ ಎನ್ನಲಾಗುತ್ತಿದೆ. ಸ್ಥಳೀಯರು ಎಂದು ಪ್ರಶ್ನಿಸುವುದಾರೆ ಹೆಳವರನ್ನು ಕೇಳಿ ಮೂಲತಃ ಯಾರೂ ಸ್ಥಳೀಯರಲ್ಲ ಬೇರೆಡೆಯಿಂದ ಬಂದವರಾಗಿದ್ದು, ಕುಷ್ಟಗಿ ಕ್ಷೇತ್ರದ ಹಾಲಿ ಶಾಸಕರು ಎಲ್ಲಿಯವರು ಎಂದು ಖಾರವಾಗಿ ಪ್ರಶ್ನಿಸಿದರು.
ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ನಾಗರಾಜ ಮೇಲಿನಮನಿ ಹಾಜರಿದ್ದರು.