ಕಟಪಾಡಿ: ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಬಿಜೆಪಿಯು ಟ್ರೇಡಿಂಗ್ ಸರಕಾರವಾಗಿದೆ. ಜನಸಾಮಾನ್ಯರ ಬಗ್ಗೆ ಅಸಡ್ಡೆ, ತಾತ್ಸಾರ ಮನೋಭಾವನೆಯಿಂದ ಆಡಳಿತ ನಡೆಸುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಆಡಳಿತ ವೈಖರಿಯ ವಿರುದ್ಧ ಕಿಡಿಕಾರಿದರು. .
ಅವರು ಜೂ.15ರಂದು ಉದ್ಯಾವರದಲ್ಲಿ ಡಿಸೆಲ್ ಪೆಟ್ರೋಲ್ ಬೆಲ ಏರಿಕೆಯ ವಿರುದ್ಧ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊರೊನಾದಿಂದ ಬಡ ಜನತೆ ತತ್ತರಿಸುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಬೆಲೆ ಏರಿಕೆಯ ಮೂಲಕ ಬಡ ವರ್ಗದ ಜನರ ರಕ್ತ ಹೀರುವ ಕೆಲಸ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರವು ಮಾಡುತ್ತಿದೆ. ಕೇಂದ್ರ ಸರಕಾರದ ಬೇಜವಾಬ್ದಾರಿಯಿಂದಾಗಿ ಕೊರೊನಾದಿಂದ 10 ಲಕ್ಷಕ್ಕೂ ಮಿಕ್ಕಿ ಜನರ ಪ್ರಾಣ ಬಲಿಯಾಗಿದೆ. ಕೇಂದ್ರ ಸರಕಾರಕ್ಕೆ ಪೈಪೋಟಿಯಾಗಿ ರಾಜ್ಯ ಬಿಜೆಪಿ ಸರಕಾರವೂ ವಿದ್ಯುತ್ಬೆಲೆ ಏರಿಕೆ ನಡೆಸಿದೆ. ಪ್ರಭು ಶ್ರೀ ರಾಮನ ಹೆಸರಿನ ವಂತಿಗೆಯಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಡೆಸಿ ದೇವರ ಹೆಸರಿನಲ್ಲಿಯೂ ದುಡ್ಡು ಅಪಹರಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಂಡರಗಿ: ಅಕ್ರಮ ಮರಳು ಅಡ್ಡೆಗಳ ಮೇಲೆ ಜಿಲ್ಲಾಧಿಕಾರಿ ದಾಳಿ
ಈ ಸಂದರ್ಭ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಕಾರ್ಯದಶರ್ಿ ರಾಯ್ಸ್ ಫೆನರ್ಾಂಡೀಸ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿತೇಶ್ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಲನ್ ಫೆನರ್ಾಂಡೀಸ್, ಉದ್ಯಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಗಂಧಿ ಶೇಖರ್, ಆಲ್ಪಸಂಖ್ಯಕ ಘಟಕದ ಆಧ್ಯಕ್ಷ ಇಫರ್ಾರ್ನ, ಕಿಸಾನ್ ಘಟಕಾಧ್ಯಕ್ಷ ಶೇಖರ ಕೋಟ್ಯಾನ್, ಕಾಪು ಬ್ಲಾಕ್ (ಉ) ಕಾಂಗ್ರೆಸ್ ಕಾರ್ಯದಶರ್ಿ ದಿವಾಕರ ಬೊಳ್ಜೆ, ಪ್ರಮುಖರಾದ ನಾಗೇಶ್ ಕುಮಾರ್ ಉದ್ಯಾವರ, ಶಶಿಧರ್ ಶೆಟ್ಟಿ ಎಲ್ಲೂರು, ನ್ಯಾಯವಾದಿ ಹರೀಶ್ ಶೆಟ್ಟಿ, ರಾಘವೇಂದ್ರ ಶಿರ್ವ, ಲಕ್ಷ್ಮೀಶ ಶೆಟ್ಟಿ, ರಿಯಾಜ್ ಪಳ್ಳಿ, ಗ್ರಾ.ಪಂ. ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.