Advertisement

ಮಾಜಿ ಸಚಿವ ತಿಪ್ಪೇಸ್ವಾಮಿಗೆ “ವಾಲ್ಮೀಕಿ’ಪ್ರಶಸ್ತಿ

09:25 AM Oct 05, 2017 | |

„ಬೆಂಗಳೂರು: ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರಸಕ್ತ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಮಾಜಿ ಸಚಿವ ತಿಪ್ಪೇಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ವಿಧಾನಸೌಧ ಮುಂಭಾಗದಲ್ಲಿ ಗುರುವಾರ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ,ಪ್ರಶಸ್ತಿ ಐದು ಲಕ್ಷ ರೂ. ನಗದು ಹಾಗೂ ಫ‌ಲಕ ಒಳಗೊಂಡಿರುತ್ತದೆ ಎಂದು ತಿಳಿಸಿದರು. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಸುಕನ್ಯಾ ಮಾರುತಿ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ವಿವರವಾಗಿ ಚರ್ಚಿಸಿ ತಿಪ್ಪೇಸ್ವಾಮಿ ಅವರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.
ಪ್ರಶಸ್ತಿ ಕೋರಿ 48 ಅರ್ಜಿ ಬಂದಿದ್ದವು. ಆದರೆ, ತಿಪ್ಪೇಸ್ವಾಮಿಯವರು ಅರ್ಜಿಯನ್ನೇ ಹಾಕಿರದಿದ್ದರೂ ಅವರ ಸೇವೆ ಪರಿಗಣಿಸಿ ಸಮಿತಿ ಆಯ್ಕೆ ಮಾಡಿದೆ ಎಂದರು.

ವಾಲ್ಮೀಕಿ ಹೆಸರು: ಶಾಸಕರ ಭವನದ ಮುಂಭಾಗದಲ್ಲಿರುವ ಉದ್ಯಾನಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನಿಡಲು 
ತೀರ್ಮಾನಿಸಲಾಗಿದೆ. ಗುರುವಾರ ನಡೆಯಲಿರುವ  ಸಮಾರಂಭದಲ್ಲಿ ಉದ್ಯಾನಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಿ ಅವರ ಪುತ್ಥಳಿ ಅನಾವರಣ ಮಾಡಲಾಗುವುದು ಎಂದು ಹೇಳಿದರು.

ಪೂಜೆ ಅವರವರಿಷ್ಟ: ವಿಧಾನಸೌಧದ ಕೊಠಡಿಯಲ್ಲಿ  ಆಯುಧ ಪೂಜೆ ಮಾಡುವುದಿಲ್ಲ ಎಂಬ ಹೇಳಿಕೆ ವಿವಾದ ಆಗಿರುವ ಬಗ್ಗೆ ಪ್ರತಿಕ್ರಿಯಿಸಿ, “ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿ¨ªಾರೆ. ಆದರೆ, ತಮ್ಮ ಧರ್ಮಕ್ಕೆ ಪೂರಕವಾದ ಪೂಜೆ, ಪುನಸ್ಕಾರಗಳನ್ನು ಯಾರು ಬೇಕಾದರೂ ಮಾಡಬಹುದು’ ಎನ್ನುತ್ತ “ಉಳ್ಳವರು ಶಿವಾಲಯ ಮಾಡುವವರು’ ಎಂಬ ವಚನ ಹೇಳಿದರು. “ನಾನು ಯಾರಿಗೂ ಪೂಜೆ ಮಾಡಿ, ಮಾಡಬೇಡಿ ಎಂದು ಹೇಳಿಲ್ಲ. ಅವರವರ ನಂಬಿಕೆ-ಭಾವನೆಗೆ ಅಡ್ಡಿ ಯಾರೂ ಮಾಡಬಾರದು. ನಾನು ಪೂಜೆ ಮಾಡಿಲ್ಲ ಅಷ್ಟೆ’ ಎಂದು ಸ್ಪಷ್ಟಪಡಿಸಿದರು.

ತಿಪ್ಪೇಸ್ವಾಮಿ ಪರಿಚಯ…
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಭರಮಸಾಗರದ ಗ್ರಾಮದ ತಿಪ್ಪೇಸ್ವಾಮಿ ನಾಯಕ ಜನಾಂಗಕ್ಕೆ ಸೇರಿದವರು.
1974ರಲ್ಲಿ ಚಳ್ಳಕೆರೆ ಪುರಸಭೆ ಸದಸ್ಯರಾಗಿ 1977ರಲ್ಲಿ ಅಧ್ಯಕ್ಷರಾಗಿದ್ದರು. 1983ರಲ್ಲಿ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಚಳ್ಳಕೆರೆ ತಾಲೂಕು ಅಧ್ಯಕ್ಷರಾಗಿ 1985ರಲ್ಲಿ ಚಳ್ಳಕೆರೆ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1989ರಲ್ಲಿ ಸ್ಪರ್ಧಿಸಿ ಸೋಲನುಭವಿಸಿ 1994ರಲ್ಲಿ ಮತ್ತೆ ಆಯ್ಕೆಯಾಗಿದ್ದರು. ದೇವೇಗೌಡರ ಸಂಪುಟದಲ್ಲಿ ಅಬಕಾರಿ ಸಚಿವರಾಗಿ, ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. 2008ರಲ್ಲಿ ಮತ್ತೂಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ತಿಪ್ಪೇಸ್ವಾಮಿಯವರು ವಾಲ್ಮೀಕಿ ಗುರುಪೀಠ ಸ್ಥಾಪಿಸಲು ಶ್ರಮಿಸಿದ್ದು, ವಾಲ್ಮೀಕಿ ಸಮುದಾಯ ಎಸ್‌ಟಿ ವರ್ಗಕ್ಕೆ ಸೇರಿಸಲು ಹಾಗೂ ಶಿಕ್ಷಣ ಸಂಸ್ಥೆ ತೆರೆದು ಸಮುದಾಯಕ್ಕೆ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

Advertisement

ರಾಜ್ಯದಲ್ಲಿ ನಡೆದ ಜಾತಿ ಗಣತಿಯ ವಿವರಗಳನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು. ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೈಗೊಂಡಿರುವ ಕ್ರಾಂತಿಕಾರಕ ತೀರ್ಮಾನವಿದು. ನಮ್ಮ ಸರ್ಕಾರ ವರದಿ ಬಿಡುಗಡೆ ಮಾಡಿಯೇ ತೀರುತ್ತದೆ. 
●ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next