Advertisement

ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು, ನಾನು ನಿರಪರಾಧಿ: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ

10:22 AM Mar 09, 2021 | Team Udayavani |

ಬೆಂಗಳೂರು: ಸಿಡಿ ಪ್ರಕರಣ ಬಯಲಾದ ಬಳಿಕ ಮೊದಲ ಬಾರಿಗೆ ಮಾಧ್ಯಮದೆದರು ಬಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಪತ್ರಿಕಾಗೋಷ್ಠಿ ನಡೆಸಿದರು.

Advertisement

ಈ ಸಿಡಿ ಸಂಪೂರ್ಣ ನಕಲಿಯಾಗಿದೆ. ನಾನು ನಿರಪರಾಧಿ. ನನ್ನ ರಾಜಕೀಯ ಏಳಿಗೆ ಸಹಿಸದ 2+3+4 ಇದ್ದಾರೆ. ಅವರು ಯಾವ ತನಿಖೆಗೆ ಆಗ್ರಹಿಸುತ್ತಾರೆ ಅದಕ್ಕೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ.

ಈ ಸಿಡಿ ನಾಲ್ಕು ತಿಂಗಳ ಹಿಂದೆ ಮಾಡಿರೋದು. ನನ್ನ ಸಹೋದರ ಎರಡು ಬಾರಿ ನಾಗರಾಜ್ ಮೂಲಕ ನನಗೆ ಕೇಳಿದ್ದರು.
ನಮ್ಮ ಹೈ ಕಮಾಂಡ್ 26 ಗಂಟೆ ಮುಂಚೆಯೇ ನನಗೆ ಕರೆ ಮಾಡಿ ಸಿಡಿ ಬಗ್ಗೆ ಮಾಹಿತಿ ನೀಡಿದ್ದರು. ಧೈರ್ಯವಾಗಿರು ಕಾನೂನು ಪ್ರಕಾರ ಹೋರಾಟ ಮಾಡೋನ ಅಂತ ಹೇಳಿದ್ದರು ಎಂದರು.

ನನ್ನ ರಾಜಕೀಯದ ಏಳಿಗೆ ಸಹಿಸಲಾಗದವರು ಈ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಎರಡು ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಯಶವಂತಪುರ ಮತ್ತು ಹುಳಿಮಾವುನಲ್ಲಿ ಷಡ್ಯಂತ್ರ ನಡೆಸಲಾಗಿದೆ. ಒಂದು ನಾಲ್ಕನೇ ಮಹಡಿ ಮತ್ತು ಒಂದು ಐದನೇ ಮಹಡಿಯಲ್ಲಿ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಉಡುಪಿಯ ಪುತ್ತೂರು ಬಳಿಯ ಮನೆಯೊಂದಕ್ಕೆ ಎಸಿಬಿ ದಾಳಿ: ಪರಿಶೀಲನೆ

Advertisement

ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರನ್ನು ಬಿಡುವುದಿಲ್ಲ. ಏನೇ ಆಗಲಿ ಅವರನ್ನು ಬಿಡುವುದಿಲ್ಲ. ಎಷ್ಟೇ ಖರ್ಚಾಗಲಿ ಅವರನ್ನು ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ರಾಜಕೀಯಕ್ಕಿಂತ ನನಗೆ ನನ್ನ ಕುಟುಂಬದ ಮರ್ಯಾದೆ ಮುಖ್ಯ. ನನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿರುವ ಎಲ್ಲಾ ಮಾಹಿತಿಗಳಿಗೆ ನಾನು ಬದ್ಧವಾಗಿದ್ದೇನೆ. ಐವತ್ತು ಲಕ್ಷ ನೀಡಿರುವುದಲ್ಲ, ಐದು ಕೋಟಿ ನೀಡಿದ್ದಾರೆ. ಅದಲ್ಲದೆ ಎರಡು ಪ್ಲಾಟ್ ನ್ನು ಯುವತಿಗೆ ನೀಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ರಕ್ಷಣೆಗೆ ಧಾವಿಸಿದವರೂ ಸೇರಿ 9 ಜನರ ದುರ್ಮರಣ

Advertisement

Udayavani is now on Telegram. Click here to join our channel and stay updated with the latest news.

Next