ಚಿಕ್ಕಮಗಳೂರು: ತಾಕತ್ತಿದ್ದರೆ ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯಾಗಿ ಪಕ್ಷ ಸಂಘಟನೆ ಮಾಡಲಿ. ಸಿದ್ದುವಿನದ್ದು ಅವಕಾಶವಾದ ರಾಜಕಾರಣ, ಅಧಿಕಾರದ ದಾಹ. ಸಿದ್ದು ಜೆಡಿಎಸ್ ಯಾಕೆ ಬಿಟ್ಟು ಬಂದರು, ಅಲ್ಲಿ ಫೇಲ್ ಆಗಿ ಕಾಂಗ್ರೆಸ್ ಸೇರಿದ್ದಾರೆ. ಸಿಎಂ, ವಿಪಕ್ಷ ನಾಯಕ ಸ್ಥಾನ ಇಲ್ಲ ಅಂದ್ರೆ ಕಾಂಗ್ರೆಸ್ಸಿಗೆ ಒದ್ದು ಬರ್ತಾರೆ. ಅವರದ್ದು ವಿಚಾರ ಸಿದ್ದಾಂತ ಅಲ್ಲ, ಅಧಿಕಾರಕ್ಕೋಸ್ಕರ ಹೇಳುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ನನಗೆ ಅಧಿಕಾರವೇ ಮುಖ್ಯ ಅಂದಿದ್ರೆ ಅವರಂತೆ ಮಾಡುತ್ತಿದ್ದೆ. ನಾನು ನಾಯಕರು ಹೇಳಿದಂತೆ ರಾಜೀನಾಮೆ ಅಲ್ಲ. ನಿವೃತ್ತಿಯಾಗಿದ್ದೇನೆ. ಈಗ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದರು.
ಸಿದ್ದರಾಮಯ್ಯಗೆ ಬಿಜೆಪಿ ಶಿಸ್ತಿನ ಬಗ್ಗೆ ಕಲ್ಪನೆನೇ ಇಲ್ಲ. ನಮ್ಮ ನಾಯಕರು ಚುನಾವಣೆಗೆ ನಿಲ್ಲಬೇಡ, ನಿವೃತ್ತಿಯಾಗು ಅಂದ್ರೆ ನಿವೃತ್ತಿಯಾದೆ. ಪಕ್ಷದ ಮಾತು ಕೇಳಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದರು.
ಮುಸ್ಲಿಂ ಸಮುದಾಯದ 2 ಬಿ ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿದ ಬ್ಗೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂ ಕೋರ್ಟ್ ತಡೆ ಕೊಟ್ಟಿದೆ, ರದ್ದು ಮಾಡಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿ ತಡೆಯನ್ನು ತೆರವು ಮಾಡಿಸುತ್ತೇವೆ. ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿಯನ್ನು ಜಾಸ್ತಿ ಮಾಡಿದ್ದೇವೆ. ಸಾಮಾನ್ಯ ವ್ಯವಸ್ಥೆಯಲ್ಲಿ 10% ಮೀಸಲಾತಿಯನ್ನು ಮುಸ್ಲಿಂಮರಿಗೆ ಕೊಟ್ಟಿದ್ದೇವೆ. ಎಲ್ಲಾ ಅಂಶಗಳನ್ನು ಸುಪ್ರೀಂಕೋರ್ಟಿಗೆ ತಿಳಿಸಿ ತಡೆಯನ್ನ ತೆರವುಗೊಳಿಸುತ್ತೇವೆ. ನ್ಯಾಯ ಬದ್ಧವಾಗಿ ತೀರ್ಮಾನ ಬರುತ್ತದೆ ಎಂಬ ವಿಶ್ವಾಸ ಇದೆ. ಜನಸಂಖ್ಯೆಗೆ ತಕ್ಕಂತೆ ಮೀಸಲಾತಿಯನ್ನು ನೀಡಬೇಕು ಎಂಬುವುದು ನಮ್ಮ ನಿಲುವು ಎಂದರು.