Advertisement

ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ, ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ: ಈಶ್ವರಪ್ಪ

12:24 PM Jun 22, 2022 | Team Udayavani |

ಶಿವಮೊಗ್ಗ: ಎಂತೆಂಥಾ ಸಂದರ್ಭದಲ್ಲಿ ದೇಶಕ್ಕಾಗಿ ಮೋದಿ ಸೇವೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೋಬ್ಬ ವ್ಯಕ್ತಿಗೂ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿರುವುದು ಪ್ರಧಾನಿ ಮೋದಿ. ಇದನ್ನು ಬೇರೆ ದೇಶದವರೇ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಟೀಕೆ ಮಾಡುವುದಕ್ಕೆ ಬೆಲೆ ಇಲ್ಲ. ಟೀಕೆ ಮಾಡುವುದೇ ಇವರ ಕೆಲಸ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮೋದಿ ರಾಜ್ಯ ಭೇಟಿ ಬಗ್ಗೆ ಸಿದ್ದರಾಮಯ್ಯ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಅವತ್ತೇ ಹೇಳಿದ್ದೆ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ.  ಸಿದ್ದರಾಮಯ್ಯ ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಎಷ್ಟೆಷ್ಟು ಕೆಜಿ ಅಕ್ಕಿ ಕೊಟ್ಟಿದ್ದು. ಸಿದ್ದರಾಮಯ್ಯ ಅವರಿಗೆ ನೆನಪು ಇದೆಯಾ…? ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡಿದರೆ ನಮ್ಮ‌ ದೇಶದಲ್ಲಿ ಅದಕ್ಕೆ ಔಷಧಿ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಕೇಂದ್ರದಿಂದ ಝಡ್ ಪ್ಲಸ್ ಭದ್ರತೆ

ಜನರೇ ಕಾಂಗ್ರೆಸ್ ನವರಿಗೆ ದೇಶದಲ್ಲಿ ಉತ್ತರ ಕೊಟ್ಟಾಗಿದೆ. ಇದೀಗ ಕಾಂಗ್ರೆಸ್ ಬೆಂಬಲಿತ ಮಹಾರಾಷ್ಟ್ರ ಸರ್ಕಾರಕ್ಕೂ ಔಷಧಿ ಸಿಗುತ್ತಿದೆ. ರಾಜ್ಯದಲ್ಲೂ ಕೂಡ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೂ ಪೂರ್ಣ ಔಷಧಿ ಕೊಟ್ಟು ಓಡಿಸುತ್ತಾರೆ. ಮಹಾ ಸರ್ಕಾರ ಪತನ- ಇದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ ಎಲ್ಲಿದಿಯೋ, ಬೆಂಬಲ  ಕೊಟ್ಟವರು, ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶ ಆಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುಪಿಯಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತ ಹುಡುಕಬೇಕು.  ಮಹಾರಾಷ್ಟ್ರದಲ್ಲಿ ಸರಕಾರ ಬಿದ್ದು ಹೋಗುತ್ತಿದೆ. ಅವರಾಗಿ ಅವರೇ ಬಂದ್ರೆ ಸರಕಾರ ರಚನೆ ಮಾಡುತ್ತೇವೆ. ಈಗಿನ ಸರಕಾರದಲ್ಲಿ ಎಷ್ಟು ಪಕ್ಷ ಇದೆಯೋ ಗೊತ್ತಿಲ್ಲ. ಒಬ್ಬರಿಗೊಬ್ಬರು ನಂಬಿಕೆ ಇಲ್ಲ. ಮಹಾರಾಷ್ಟ್ರದಲ್ಲಿ ಹಿಂದುತ್ವದ ಬಗ್ಗೆ  ಬಾಳಠಾಕ್ರೆ ಹುಲಿ ಇದ್ದ ರೀತಿ ಇದ್ದರು. ಆದರೆ, ಉದ್ಬವ್ ಟಾಕ್ರೆ ಇಲಿ ಇದ್ದಂಗೆ ಇದ್ದಾರೆ. ಯಾವುದೇ ಕಾರಣಕ್ಕೂ ಮಹಾ ಸರ್ಕಾರ ಉಳಿಯಲ್ಲ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next