Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ನಗರಸಭೆಯಲ್ಲಿ ಬಹುಮತವಿಲ್ಲದಿ ದ್ದರೂ ಮೀಸಲಾತಿ ಬಲದಿಂದ ಅಧಿಕಾರ ಹಿಡಿದಿರುವ ಬಿಜೆಪಿ ನಗರಸಭೆ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದೆ. ಆಯುಕ್ತರು ಬಿಜೆಪಿ ಏಜೆಂಟ ರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೆ ಕೋಟ್ಯಂತರ ರೂ. ಕಾಮಗಾರಿಗಳನ್ನು ನಗರಸಭೆ ಅಧ್ಯಕ್ಷರು, ಆಯುಕ್ತರು ಅನುಷ್ಠಾನಗೊಳಿಸುತ್ತಿದ್ದಾರೆ. 10 ತಿಂಗಳ ನಂತರ ಇತ್ತೀಚೆಗೆ ನಡೆದ ಸಾಮಾನ್ಯಸಭೆಯ ಅಜೆಂಡಾದಲ್ಲಿ ಇಲ್ಲದ 27 ಪ್ರಮುಖ ವಿಷಯಗಳನ್ನು ಇತರೆ ವಿಷಯಗಳಲ್ಲಿ ಸೇರಿಸಿಕೊಂಡು ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ಆಗಿದೆ ಎಂದು ಸುಳ್ಳು ದಾಖಲೆ ಮಾಡಲಾಗಿದೆ ಎಂದು ಹೇಳಿದರು.
Related Articles
Advertisement
ಅಕ್ರಮಗಳನ್ನು ಬಯಲಿಗೆಳೆಯುತ್ತೇವೆ: ಕಾನೂನು ಚೌಕಟ್ಟು ಬಿಟ್ಟು ಕೆಲಸ ಮಾಡಿದರೆ ಎಂದಾದರೂ ಅಧಿಕಾರಿಗಳು ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ. ನಗರಸಭೆಯ ಆಡಳಿತದಲ್ಲಿ ರಾಜಕೀಯ ಮಾಡಬಾರದು ಎಂದು ಇದುವರೆಗೂ ಸುಮ್ಮನಿದ್ದೆವು. ಇನ್ನು ಮುಂದೆ ಸಹಿಸುವುದಿಲ್ಲ ಹೋರಾಟ ಆರಂಭಿಸಿ ಅಕ್ರಮಗಳನ್ನು ಬಯಲಿಗೆಳೆದು ಸಂಬಂಧಪಟ್ಟವರು ಕಾನೂನು ಕ್ರಮ ಎದುರಿಸುವಂತೆ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಹೇಳಿದರು.
ಅನಗತ್ಯ ಕಾಮಗಾರಿಗೆ ವೆಚ್ಚ: ಹಾಸನದ ಮಹಾರಾಜ ಪಾರ್ಕ್ ನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅನಗತ್ಯ ಕಾಮಗಾರಿಗ ಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಗರಸಭೆಯ ಅನು ಮೋದನೆ ಇಲ್ಲದೆ ಕಾಮಗಾರಿ ಮಾಡುವಂತಿಲ್ಲ. ಆದರೂ, ಕೆಲಸ ಮಾಡುತ್ತಾರೆಂದರೆ ಆಯುಕ್ತರ ಮೇಲೆ ಎಫ್ ಐಆರ್ ದಾಖಲು ಮಾಡಬೇಕು. ನಾನು ಜಿಲ್ಲಾ ಉಸ್ತು ವಾರಿ ಸಚಿವನಾಗಿದ್ದಾಗ ಹಾಸನದ ಚನ್ನಪಟ್ಟಣ ಕೆರೆ ಅಭಿ ವೃದ್ಧಿಗೆ ಮಂಜೂರು ಮಾಡಿಸಿದ್ದ 144 ಕೋಟಿ ರೂ. ಅನ್ನು ಪಾರ್ಕ್ ಅಭಿವೃದ್ಧಿಯಂತಹ ಅನಗತ್ಯ ಕಾಮಗಾರಿಗಳಿಗೆ ವೆಚ್ಚಮಾಡಿ ಲೂಟಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
10 ಕೋಟಿ ರೂ. ಗೌಡರು ಕೊಡಿಸಿದ್ದು: ಜಿಲ್ಲಾ ಕೇಂದ್ರವಾದ ಹಾಸನ ನಗರದ ಅಭಿವೃದ್ಧಿಯೆಂದರೆ ಜಿಲ್ಲೆಯ ಎಲ್ಲ ಶಾಸಕರಿಗೂ ಸಂಬಂಧಿಸಿದ್ದು. ಕೇವಲ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಾಸನ ನಗರವನ್ನು ಯಾವುದೋ ಒಂದು ಪಕ್ಷಕ್ಕೆ ಗುತ್ತಿಗೆ ಕೊಟ್ಟಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಕ್ರೀಡಾಂಗಣ ಕಾಮಗಾರಿಯಲ್ಲೂ ವಸೂಲಿ: ಹಾಸನದ ಕ್ರೀಡಾಂಗಣದ ಅಭಿವೃದ್ಧಿಗೆ ಮಾಜಿ ಪ್ರಧಾನಿ, ಸಂಸದ ದೇವೇಗೌಡ ಕೇಂದ್ರ ಸರ್ಕಾರದಿಂದ 10 ಕೋಟಿ ರೂ. ಮಂಜೂರು ಮಾಡಿಸಿದ್ದರು. ಈಗ ಕ್ರೀಡಾಂಗಣದ ಅಭಿ ವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಆ ಕಾಮಗಾರಿಯಲ್ಲೂ ವಸೂಲಿ ನಡೆಯುತ್ತಿದೆ ಎಂಬ ದೂರಿದೆ ಎಂದು ಹೇಳಿದರು.
ಅನುದಾನದ ವಿವರ: ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಪಕ್ಷಪಾತ ಮಾಡದೆ ಹಾಸನ ನಗರದ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ಕೊಡಿಸಿದ್ದೆ. ಹಾಸನ -ದುದ್ದ ರಸ್ತೆ ಚತುಷ್ಪಥ ಕಾಮಗಾರಿಗೆ 100 ಕೋಟಿ ರೂ., ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮೂಲ ಸೌಕರ್ಯಗಳಿಗೆ 50 ಕೋಟಿ ರೂ., ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 250 ಕೋಟಿ ರೂ. ಕೊಡಿಸಿದ್ದೆ. ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಚಾಲನೆ ಕೊಡಿಸಿದೆ ಎಂದು ಹಾಸನ ನಗರದ ಅಭಿವೃದ್ಧಿಗೆ ಮಂಜೂರಾಗಿದ್ದ ಅನುದಾನದ ವಿವರ ನೀಡಿದರು.
ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ: ಈಗ ಕೆಲವು ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿರಬಹುದು. ಜೆಡಿಎಸ್‌ಗೂ ಅಧಿಕಾರ ಸಿಕ್ಕಾಗ ಅವುಗಳನ್ನು ಅನುಷ್ಠಾನ ಮಾಡುತ್ತೇವೆ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯೇ ಶಾಶ್ವತವಾಗಿ ಅಧಿಕಾರದಲ್ಲಿರುವುದಿಲ್ಲ. ಇದನ್ನು ಅಧಿಕಾರಿಗಳೂ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಕೆಲವು ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಮುಂ ದಿನ ದಿನಗಳಲ್ಲಿ ಅಪಾಯ ಕಾದಿದೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಾಕಿ ಘಟಕದ ವಿರುದ್ಧ ಆಕ್ರೋಶ: ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿರುವ ಸಿದ್ಧ ಒಳಉಡುಪುಗಳ ಘಟಕದಲ್ಲಿ ಸ್ಥಳೀಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಹಳ ವರ್ಷಗಳಿಂದ ಘಟಕದ ಕಾರ್ಮಿಕರ ಸಾಗಾಣೆ ನಿರ್ವಹಿಸುತ್ತಿದ್ದ 300 ವಾಹನಗಳ ಮಾಲಿಕರು, ಚಾಲಕರನ್ನು ಕೈಬಿಟ್ಟು ಇಬ್ಬರಿಗೆ ಗುತ್ತಿಗೆ ನೀಡಲು ಅಲ್ಲಿನ ವ್ಯವಸ್ಥಾಪಕನೊಬ್ಬ ಹುನ್ನಾರ ನಡೆಸಿದ್ದಾರೆ. ಆತ ಬಿಜೆಪಿ ಏಜೆಂಟನಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಅಲ್ಲಿ ಇಂದು ವಾಹನಗಳ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವುದನ್ನು ನಾವು ಸಹಿಸುವುದಿಲ್ಲ. ನಾನೇ ಮುಂದೆ ನಿಂತು ಹೋರಾಟ ಮಾಡುತ್ತೇನೆ. ಈ ಹಿಂದೆ ಇದ್ದಂತೆಯೇ ವಾಹನಗಳ ಗುತ್ತಿಗೆ ವ್ಯವಹಾರ ನಡೆಯಬೇಕು ಎಂದು ಹೇಳಿದರು.
ಸ್ಥಳೀಯರ ಕಡೆಗಣನೆ ಸಹಿಸುವುದಿಲ್ಲ: ಜಾಕಿ ಮತ್ತು ಹಿಮ್ಮತ್‌ಸಿಂಗ್ ಜವಳಿ ಘಟಕದಲ್ಲಿ ಕಾರ್ಮಿಕರ ನೇಮಕ, ಇತರೆ ವ್ಯವಹಾರಗಳಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ದೂರಿದೆ. ಸ್ಥಳೀಯರನ್ನು ಕಡೆಗಣಿಸುವುದನ್ನು ಜೆಡಿಎಸ್ ಸಹಿಸುವುದಿಲ್ಲ. ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹಾಸನ ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಅವರೂ ಉಪಸ್ಥಿತರಿದ್ದರು.