Advertisement
ನಗರದಲ್ಲಿ ಮಾತಾನಾಡಿದ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಮೂರುವರೆ ಸಾವಿರಕ್ಕೂ ಅಧಿಕವಾಗಿ ನಮ್ಮ ಸದಸ್ಯರಿದ್ದಾರೆ. ನಾವು ಮೊದಲ ಪ್ರಾಶಸ್ತ್ಯದಲ್ಲೇ ಗೆಲ್ಲುತ್ತೇವೆ. ಎರಡನೇ ಸ್ಥಾನಕ್ಕೆ ಯಾರು ಯಾರು ಯಾವ ಬಲಗಳನ್ನು ಪ್ರಯೋಗಿಸುತ್ತಾರೋ ಗೊತ್ತಿಲ್ಲ. ಅದರ ಮೇಲೆ ಎರಡನೇ ಸ್ಥಾನದ ಫಲಿತಾಂಶ ನಿಂತಿದೆ ಎಂದರು.
Related Articles
Advertisement
ನಾನು ಎಂದಿಗೂ ಕನಸು ಮನಸಿನಲ್ಲೂ ಪರಿಷತ್ ಚುನಾವಣೆ ಬಗ್ಗೆ ಯೋಚನೆಯೇ ಮಾಡಿಲ್ಲ. ಆ ಸುದ್ದಿಯನ್ನು ಯಾರು ಸೃಷ್ಟಿಸಿದರೋ ನನಗೆ ಗೊತ್ತಿಲ್ಲ. ನಾನಂತೂ ಎಂದಿಗೂ ಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಈಶ್ವರಪ್ಪನವರೇ ನಮ್ಮಲ್ಲಿ ಜನ ಇಲ್ಲ,ಎಲ್ಲ ಕಡೆ ಶಂಖ ಊದಲಿಕ್ಕೆ ನಾನೇ ಹೋಗಬೇಕು: ಎಚ್ .ಡಿ.ಕೆ
ರಾಜ್ಯದ ನೆರೆ ಪರಿಸ್ಥಿತಿಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಸಿದೆ. ಕೇವಲ ಪರ್ಸೆಂಟೇಜ್‌ಗಾಗಿ ಸಚಿವರು ಕೆಲಸ ಮಾಡುತ್ತಿದ್ದಾರೆ. ಖುದ್ದು ಪ್ರಧಾನಿಗೆ ಈ ವಿಚಾರದಲ್ಲಿ ಪತ್ರ ಹೋಗಿದೆ. ಕೆಲಸ ಮಾಡಲು ಸಚಿವರುಗಳಿಗೆ ಬದ್ಧತೆಯೂ ಇಲ್ಲ, ಆಸಕ್ತಿಯೂ ಇಲ್ಲ. ಸರ್ಕಾರ ಇರುವುದರ ಬಗ್ಗೆ ನನಗೆ ಅನುಮಾನ ಇದೆ. ಬೆಂಗಳೂರಿನಲ್ಲಿ ಕೆರೆ ಮತ್ತು ರಾಜಕಾಲುವೆ ಒತ್ತವರಿ ತೆರವು ಆಗಬೇಕು. ಇಲ್ಲದಿದ್ದರೆ ಬೆಂಗಳೂರು ಮತ್ತೊಂದು ಚೆನ್ನೈ ಆಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.