ಗಂಗಾವತಿ: ನಗರದ ಬಿರೂನಿ ಮಸೀದಿ ವಕ್ಫ್ ವಾಣಿಜ್ಯ ಮಳಿಗೆಗಳ ಮೇಲೆ ಅಳವಡಿಸಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಹೆಸರನ್ನು ವಕ್ಫ್ ಇಲಾಖೆಯ ಅಧಿಕಾರಿಗಳು ಗುರುವಾರ ತೆರವುಗೊಳಿಸಿದ್ದಾರೆ.
ವಾಣಿಜ್ಯ ಮಳಿಗೆಗಳ ಉದ್ಘಾಟನೆ ಸಂದರ್ಭದಲ್ಲಿ ಹಾಲಿ ಶಾಸಕರನ್ನು ಆಹ್ವಾನಿಸದೇ ನಿರ್ಲಕ್ಷ್ಯ ಮಾಡಲಾಗಿದೆ ಮತ್ತು ಮಾಜಿ ಸಚಿವರ ಹೆಸರನ್ನು ಮಳಿಗೆಯ ಮೇಲೆ ಹಾಕಲಾಗಿದ್ದು ಇದು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಪರಣ್ಣ ಮುನವಳ್ಳಿ ರಾಜ್ಯ ಸರ್ಕಾರ ಮತ್ತು ವಕ್ಫ್ ಇಲಾಖೆಯ ಆಯುಕ್ತರಲ್ಲಿ ದೂರು ಸಲ್ಲಿಸಿದ್ದರು.
ಕೂಡಲೇ ಹೆಸರನ್ನು ತೆಗೆದುಹಾಕುವಂತೆ ವಕ್ಫ್ ಇಲಾಖೆ ಜಿಲ್ಲಾ ವಕ್ಫ್ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು ನಂತರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೆಸರನ್ನು ಮೇಲೆ ಬಟ್ಟೆಯಿಂದ ಮರೆ ಮಾಡಲಾಗಿತ್ತು .ಪುನಃ ಶಾಸಕ ಪರಣ್ಣ ಮನವಳ್ಳಿ ಇದನ್ನು ಸರ್ಕಾರದ ಗಮನಕ್ಕೆ ತಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಉದ್ಘಾಟನೆಯ ಹೆಸರನ್ನ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ .
ವಕ್ಫ್ ಹೆಸರಿನಲ್ಲಿರುವ ಈ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವಾಗ ಗಾಂಧಿನಗರದ ಕೆಲ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು ಆಗ ಮಳಿಗೆಗಳ ನಿರ್ಮಾಣ ಮಾಡದಂತೆ ಆಕ್ಷೇಪ ವ್ಯಕ್ತವಾಗಿತ್ತು .ಜಿಲ್ಲೆಯ ವಿವಿಧ ಭಾಗದಿಂದ ವಾಣಿಜ್ಯ ಮಳಿಗೆ ನಿರ್ಮಾಣದ ಜಾಗದಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು ಈ ಮಧ್ಯೆ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಮಳಿಗೆ ನಿರ್ಮಾಣ ಕಾರ್ಯಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಹ ಸ್ಥಳಕ್ಕೆ ಭೇಟಿ ನೀಡಿ ಮಳಿಗೆಗಳ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದರು .ಮಳಿಗೆಗಳ ಉದ್ಘಾಟನೆ ಸಂದರ್ಭದಲ್ಲಿ ಜನಪ್ರತಿನಿಗಳನ್ನು ಆಹ್ವಾನ ಮಾಡದೆ ಮಾಜಿ ಸಚಿವರನ್ನು ಆಹ್ವಾನಿಸಿದ್ದು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಶಾಸಕ ಪರಣ್ಣ ಮನವಳ್ಳಿ ಸರ್ಕಾರದ ಗಮನಕ್ಕೆ ತಂದಿದ್ದರು .
ಇದೀಗ ವಾಣಿಜ್ಯ ಮಳಿಗೆಗಳ ಮೇಲೆ ಉದ್ಘಾಟಕರು ಇಕ್ಬಾಲ್ ಅನ್ಸಾರಿ ಎಂಬ ನಾಮಫ ಲಕ ಅಳವಡಿಸಿದ್ದು ಇದರಿಂದ ಶಿಷ್ಟಾಚಾರ ಉಲ್ಲಂಘನೆ ಯಾಗಿದೆ, ಕೂಡಲೇ ತೆರವುಗೊಳಿಸುವಂತೆ ರಾಜ್ಯ ಸರ್ಕಾರದಿಂದ ಜಿಲ್ಲಾ ವಕ್ಫ್ ಅಧಿಕಾರಿ ಗಳಿಗೆ ಸೂಚನೆ ರವಾನೆಯಾಗಿತ್ತು .ಗುರುವಾರ ಸ್ವತಃ ವಕ್ಫ್ ಇಲಾಖೆಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉದ್ಘಾಟಕರು ಇಕ್ಬಾಲ್ ಅನ್ಸಾರಿ ಎಂಬ ಹೆಸರನ್ನು ತೆರವುಗೊಳಿಸಿದ್ದಾರೆ.
ಮಳಿಗೆ ಉದ್ಘಾಟನೆಯ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ರ ಕುರಿತು ರಾಜ್ಯ ಸರ್ಕಾರಕ್ಕೆ ಶಾಸಕ ಪರಣ್ಣ ಮನವಳ್ಳಿ ದೂರು ನೀಡಿದಾಗ ನಗರಸಭೆಯ ಸದಸ್ಯ ಹಾಗೂ ಅನ್ಸಾರಿ ಆಪ್ತ ಶ್ಯಾಮೀದ್ ಮನಿಯಾರ್ ಅಧ್ಯಕ್ಷರಾಗಿರುವ ಇಲ್ಲಿಯ ಮಸೀದಿಯ ಆಡಳಿತ ಮಂಡಳಿಯನ್ನು ಅಮಾನತ್ತಿನಲ್ಲಿಟ್ಟು ರಾಜ್ಯ ಸರಕಾರದ ವಕ್ಫ್ ಇಲಾಖೆ ಆದೇಶ ಹೊರಡಿಸಿತ್ತು .ಈ ಮಧ್ಯೆ ಧಾರವಾಡ ಹೈಕೋರ್ಟ್ ನಲ್ಲಿ ಅಮಾನತು ಆದೇಶವನ್ನು ಶಾಮೀದ್ ಮನಿಯಾರ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅಮಾನತು ಆದೇಶಕ್ಕೆ ತಡೆ ತಂದಿದ್ದರು.