Advertisement

ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನ  

11:53 PM Jan 27, 2020 | Lakshmi GovindaRaj |

ಮೂಡುಬಿದಿರೆ: ಹಿರಿಯ ಸಹಕಾರಿ ಧುರಿಣ, ಜೆಡಿಎಸ್‌ ನಾಯಕ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ (81)ಯವರು ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಮರನಾಥ ಶೆಟ್ಟಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗಳು ಪಾಲಡ್ಕದ ಮುಂಡ್ರುದೆಗುತ್ತುವಿನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿವೆ.

Advertisement

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಹಿತ ಹಲವು ಗಣ್ಯರು ಮೂಡುಬಿದಿರೆಯ ಅಮರನಾಥರ ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. 1972ರಿಂದ 2014ರ ವರೆಗೆ ಅವರು ಸತತವಾಗಿ ಮೂಡುಬಿದಿರೆ ಕ್ಷೇತ್ರದಿಂದ 10 ಬಾರಿ ಸ್ಪರ್ಧಿಸಿದ್ದರು. ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಜಾತ್ಯತೀತ ಜನತಾದಳದಿಂದ ಅವಕಾಶ ದೊರೆತಿದ್ದರೂ ಹೊಸಬರಿಗೆ ಅವಕಾಶ ದೊರೆಯಲಿ ಎಂಬ ಮೇಲ್ಪಂಕ್ತಿ ಹಾಕಿಕೊಟ್ಟರು. ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ಅವರು ಜನತಾ ಪರಿವಾರದ (ಸಂಸ್ಥಾ ಕಾಂಗ್ರೆಸ್‌, ಜನತಾ ಪಕ್ಷ, ಜನತಾದಳ) ಮುಖವಾಣಿಯೂ ಆಗಿದ್ದರು; ಐಕಾನ್‌ ಕೂಡ ಆಗಿದ್ದರು. ಸ್ವತ: ಕಲಾವಿದರಾಗಿದ್ದ ಶೆಟ್ಟಿ ಅವರು, ರಂಗಭೂಮಿಯಲ್ಲಿ ಹಾಗೂ ಪಗೆತ ಪುಗೆ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next