ಕೊಳ್ಳೇಗಾಲ: ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಸಮಾಜವನ್ನು ಮುಂದೆ ತರಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಲಕ್ಷ್ಮಿನಾರಾಯಣ ಮನವಿ ಮಾಡಿದರು.
ನಗರದ ದೇವಲ ಮಹರ್ಷಿ ವೃತ್ತದಲ್ಲಿ ನೂತನವಾಗಿ ನಿರ್ಮಿಸಿದ್ದ ಮದ್ದೇವಲ ಮಹರ್ಷಿ ಮಹಾದ್ವಾರವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ದೇವಾಂಗ ಸಮಾಜದಲ್ಲಿ ಹುಟ್ಟಿ ಶಾಸಕನಾಗಿ ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷರಾಗಿ ಮತ್ತು ನಿಗಮದ ಅಧ್ಯಕ್ಷರಾಗಿ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಸಮಾಜ ಸೇವೆ ಮಾಡಿರುವ ಹೆಗ್ಗಳಿಕೆ ಇದೆ ಎಂದರು.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ 326 ಸಮುದಾಯ ಭವನ, 193 ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ಸಮಾಜದ ಶೈಕ್ಷಣಿಕ ಪ್ರಗತಿಗಾಗಿ 10 ಎಕರೆ ಜಮೀನು ಮಂಜೂರು ಮಾಡಿ ದ್ದರು. ರಾಜ್ಯದಲ್ಲಿ ಮಠ ನಿರ್ಮಾಣ ಮತ್ತು ಕ್ಯಾಲಿಪೋರ್ನಿಯದಂತಹ ವಿದೇಶದಲ್ಲಿ ಸಮಾಜದ ಮಠಗಳು ತಲೆ ಎತ್ತುವಂತೆ ಮಾಡಿರುವುದಾಗಿ ಹೇಳಿದರು.
ಬಿಎಸ್‌ವೈ ಬಳಿಕ ಮುಖ್ಯಮಂತ್ರಿಯಾದ ಬಸವರಾಜು ಬೊಮ್ಮಾಯಿ ಸಹ 5 ಎಚ್.ಪಿ. ವಿದ್ಯುತ್ ಉಚಿತವಾಗಿ ನೀಡಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದ್ದಾರೆ. ದೇವಾಂಗ ಸಮಾಜ ಉದ್ಧಾರಕ್ಕಾಗಿ ಇನ್ನು ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಯೋಜನೆಯ ಫಲವನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕ ಎನ್.ಮಹೇಶ್, ದೇವಾಂಗ ಸಮಾಜದ ಈಶ್ವರನಂದ ಸ್ವಾಮೀಜಿ, ಕೆಆರ್‌ಐಡಿಎಲ್ ಅದ್ಯಕ್ಷ ರುದ್ರೇಶ್, ನಗರಸಭಾ ಸದಸ್ಯರಾದ ಎ.ಪಿ.ಶಂಕರ್, ಮನೋಹರ್, ಕವಿತ, ಪವಿತ್ರ, ನಟ ರಾಜು, ಪರಮೇಶ್ ಇತರರು ಇದ್ದರು.