Advertisement

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಮಾಜಿ ಮೇಯರ್‌ ಸಂಪತ್‌ಗೆ ಜಾಮೀನು

12:27 AM Feb 13, 2021 | Team Udayavani |

ಬೆಂಗಳೂರು: ಡಿ.ಜೆ. ಹಳ್ಳಿ,ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್‌ ಸಂಪತ್‌ರಾಜ್‌ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಜಾಮೀನು ಕೋರಿ ಸಂಪತ್‌ರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ| ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಜಾಮೀನು ನೀಡಿತು.

ಪ್ರಕರಣ ಕುರಿತ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಎರಡು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಬಹುದು ಎಂದು ನ್ಯಾಯಪೀಠ  ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಸಂಪತ್‌ರಾಜ್‌ಗೆ ಶಿಕ್ಷೆಯಾಗಲಿ: ಅಖಂಡ :

ಬೆಂಗಳೂರು: ದೇವರ ಜೀವನಹಳ್ಳಿ ಪ್ರಕರಣದಲ್ಲಿ ನನ್ನ ಹೋರಾಟ ಮುಂದುವರಿಯಲಿದೆ ಎಂದು ಪುಲಕೇಶಿನಗರ ಶಾಸಕ ಅಂಖಡ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

Advertisement

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪತ್‌ರಾಜ್‌ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಮನವಿ ಮಾಡಿದ್ದೇನೆ. ಅಗತ್ಯ ಬಿದ್ದರೆ ಸೋನಿಯಾ ಗಾಂಧಿಯವರಿಗೂ ಪತ್ರ ಬರೆಯುತ್ತೇನೆ. ನನ್ನ ಜತೆ ಸಿದ್ದರಾಮಯ್ಯ, ಜಮೀರ್‌ ಅಹಮದ್‌ ಇದ್ದಾರೆ. ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದರು.

ಸಂಪತ್‌ರಾಜ್‌ ಮೇಲೆ ಕ್ರಮಕ್ಕೆ ನಾನು ಒತ್ತಡ ಹಾಕಿದ್ದೇನೆ. ಆದರೂ ಅಧ್ಯಕ್ಷರು ಏನೂ ಕ್ರಮ ತೆಗೆದುಕೊಂಡಿಲ್ಲ. ಸಂಪತ್‌ಗೆ ಶಿಕ್ಷೆಯಾಗಲೇ ಬೇಕು. ನಾನು ದೇವರನ್ನು ನಂಬಿದ್ದೇನೆ. ಜಾಮೀನು ಸಿಕ್ಕಿದ ಏನೂ ಮಾತನಾಡುವುದಿಲ್ಲ. ನಾನುಹೋರಾಟ ಮುಂದುವರಿಸುತ್ತೇನೆ. ಡಿ.ಕೆ.ಶಿವಕುಮಾರ್‌ ಯಾಕೆ ಅವರ ಪರ ನಿಂತಿದ್ದಾರೋ ಗೊತ್ತಿಲ್ಲ. ನೀವೇ ಅವರನ್ನೇ ಕೇಳಬೇಕು. ನಾನು ವಲಸೆ ಬಂದಿರಬಹುದು, ಆದರೆ ಅತಿ ಹೆಚ್ಚಿನ ಮತಗಳಿಂದ ಗೆದ್ದವನು. ಮನೆಯನ್ನು ಸುಟ್ಟವರು ನನ್ನನ್ನು ಸುಡದಿ ರುತ್ತಾರಾ? ನನಗೆ ಮುಂದೆಯೂ ಅಪಾಯ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next