Advertisement

ಕ್ರಿಮಿನಲ್ ಮಾಹಿತಿ ಮರೆಮಾಚಿದ ಆರೋಪ: ಫ‌ಡ್ನವೀಸ್‌ಗೆ ಜಾಮೀನು

09:49 AM Feb 21, 2020 | Hari Prasad |

ನಾಗ್ಪುರ: 2014ರ ಚುನಾವಣೆ ವೇಳೆ ತಮ್ಮ ವಿರುದ್ಧ ಇರುವ ಕ್ರಿಮಿನಲ್‌ ಕೇಸುಗಳ ಕುರಿತ ಮಾಹಿತಿಗಳನ್ನು ಮರೆಮಾಚಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ಗೆ ನಾಗ್ಪುರ ಕೋರ್ಟ್‌ ಗುರುವಾರ ಜಾಮೀನು ನೀಡಿದೆ. ಈ ಅರ್ಜಿ ವಿಚಾರಣೆಗೆ ಖುದ್ದು ಫ‌ಡ್ನವೀಸ್‌ ಕೋರ್ಟ್‌ಗೆ ಹಾಜರಾಗಿದ್ದರು.

Advertisement

15,000 ರೂ.ಗಳ ವೈಯಕ್ತಿಕ ಬಾಂಡ್‌ ಪಡೆದು ಅವರಿಗೆ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜಾಮೀನು ನೀಡಿದರು. ಫ‌ಡ್ನವೀಸ್‌ ನಡೆಸಿರುವ ಅಪರಾಧ ಜಾಮೀನು ನೀಡುವಂಥದ್ದು. ಜೊತೆಗೆ, ಅವರು ತಲೆಮರೆಸಿಕೊಳ್ಳುವ ಸಾಧ್ಯತೆಗಳು ಇಲ್ಲ ಎಂದು ಮ್ಯಾಜಿಸ್ಟ್ರೇಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next