Advertisement
ಎ. 30ರ ಬೆಳಗ್ಗೆ 10ಕ್ಕೆ ಗಂಟೆಗೆ ಕುಂದಾಪುರದ ಹೋಲಿ ರೋಜರಿ ಚರ್ಚ್‌ನಲ್ಲಿ ಅಂತ್ಯವಿಧಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿನ್ನಿಫ್ರೆಡ್ ಚುನಾವಣೆಗೆ ನಿಲ್ಲು ವುದು ಬೇಡ ಎಂದು ಅವರ ಪತಿಯ ತಂದೆ ಹೇಳಿದ್ದರೂ ಮಂಗಳೂರಿನ ಆಸ್ತಿಯನ್ನು ಮಾರಿ, ಪತಿ ಲೂಯಿಸ್ ಎಂ. ಫೆರ್ನಾಂಡಿಸ್ ಬೆಂಬಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 1963ರಲ್ಲಿ ಕುಂದಾಪುರ ನ.ಪಂ. ಪ್ರವೇಶಿಸಿದ್ದ ಅವರು 1967ರಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ವಿಧಾನಸಭೆ ಪ್ರವೇಶಿಸಿದರು. 1972ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಶಾಸಕಿಯಾದರು. 2001ರಿಂದ 2007ರ ವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿ, 1990ರ ವರೆಗೆ ಪುರಸಭೆ ಸದಸ್ಯೆ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಪಟ್ಟಣ ಪಂಚಾ ಯತ್ ಹಾಗೂ ಪುರಸಭೆಯ ಸದಸ್ಯೆ ಯಾಗಿ ಸುಮಾರು 33 ವರ್ಷ ಸೇವೆ ಸಲ್ಲಿಸಿದ್ದ ಅವರು 17 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷೆಯಾಗಿದ್ದರು. ಯುಪಿಎ ಸರಕಾರದ ಅವಧಿಯಲ್ಲಿ ರಾಜ್ಯ ದೂರವಾಣಿ ನಿಗಮದ ನಿರ್ದೇಶಕಿಯಾಗಿದ್ದರು.
Related Articles
1972ರಲ್ಲಿ 2ನೇ ಬಾರಿಗೆ ಶಾಸಕಿಯಾಗಿದ್ದಾಗ ಕುಂದಾಪುರಕ್ಕೆ ಪೊಲೀಸ್ ಠಾಣೆ ಮಂಜೂರಾಗಿದ್ದು, ಮನೆಯ ಒಂದು ಕೋಣೆಯನ್ನೇ ಪೊಲೀಸ್ ಠಾಣೆಗೆಂದು ನೀಡಿ ದ್ದರು ಗುಂಡೂ ರಾವ್, ದೇವರಾಜ ಅರಸು, ಕಾಗೋಡು ತಿಮ್ಮಪ್ಪ, ಮಲ್ಲಿಕಾರ್ಜುನ ಖರ್ಗೆ,ಟಿ.ಎ. ಪೈ, ರಂಗನಾಥ್ ಶೆಣೈ, ಆಸ್ಕರ್ ಫೆರ್ನಾಂಡಿಸ್, ಬಿ. ಜನಾರ್ದನ ಪೂಜಾರಿ, ಎಂ. ವೀರಪ್ಪ ಮೊಲಿ, ಕೆ. ಪ್ರತಾಪ್‌ಚಂದ್ರ ಶೆಟ್ಟಿ ಸೇರಿದಂತೆ ಹೀಗೆ ಅನೇಕ ಮಂದಿ ಗಣ್ಯರ ಜತೆ ಸಂಪರ್ಕದಲ್ಲಿದ್ದರು.
Advertisement
ದೇವರಾಜ ಅರಸು ಕುಂದಾಪುರಕ್ಕೆ ಬಂದಾಗ ಅವರಿಗೆ ವಿನ್ನಿ ಅವರ ಮನೆಯಲ್ಲಿ ಮಾಡಿದ ಕಾಣೆ ಮೀನು ಸಾರು ಅಂದರೆ ತುಂಬಾ ಇಷ್ಟವಾಗುತ್ತಿತ್ತು.
ನಾಯಕಿಅವಿಭಜಿತ ದ.ಕ. ಜಿಲ್ಲೆಯ ಕ್ರೈಸ್ತ ಸಮುದಾಯದ ಹಿರಿಯ ಮುಖಂಡ ರಾಗಿದ್ದ ಅವರು ಕುಂದಾಪುರದ ಹೋಲಿ ರೋಜರಿ ಚರ್ಚ್‌ನ ಆಡಳಿತ ಮಂಡಳಿಯ ಪದಾಧಿಕಾರಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕುಂದಾಪುರಕ್ಕೆ ಮಹಿಳಾ ಪೊಲೀಸ್ ಠಾಣೆ ತರುವಲ್ಲಿ ಸಾಕಷ್ಟು ಮುತುವರ್ಜಿ ವಹಿಸಿದ್ದ ರು. ಸಂತಾಪ
ವಿನ್ನಿಫ್ರೆಡ್ ನಿಧನಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ರಾಜ್ಯ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ರಘುಪತಿ ಭಟ್, 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ, ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ,ಯು.ಆರ್. ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ ಕೊಡವೂರು, ನಾಯಕರಾದ ಎಂ.ಎ. ಗಫೂರ್, ಜನಾರ್ದನ ತೋನ್ಸೆ ಮೊದಲಾದವರು ಸಂತಾಪ ಸೂಚಿಸಿದ್ದಾರೆ.