Advertisement

Electoral ರಾಜಕಾರಣದಿಂದ ಡಿ.ವಿ.ಸದಾನಂದ ಗೌಡ ನಿವೃತ್ತಿ

11:20 PM Nov 08, 2023 | Team Udayavani |

ಹಾಸನ: ದಿಢೀರ್‌ ಬೆಳವಣಿಗೆಯಲ್ಲಿ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರು ಚುನಾವಣ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣ ರಾಜಕೀಯದಲ್ಲಿ ಮುಂದು ವರಿಯದಿರಲು ತೀರ್ಮಾನಿಸಿದ್ದೇನೆ. ಹಾಗಾಗಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಶಾಸಕನಾಗಿ, ಸಂಸದನಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಿ 30 ವರ್ಷಗಳ ಕಾಲ ರಾಜಕೀಯದಲ್ಲಿ ಅಧಿಕಾರ ಅನುಭವಿಸಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಯಡಿಯೂರಪ್ಪನವರನ್ನು ಬಿಟ್ಟರೆ ನಾನೇ ಪಕ್ಷದಲ್ಲಿ ಹೆಚ್ಚಿನ ಅಧಿಕಾರ ಅನುಭವಿಸಿರುವೆ. 10 ವರ್ಷ ಶಾಸಕ, 20 ವರ್ಷ ಸಂಸದ, 1 ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿಪಕ್ಷ ನಾಯಕ, 5 ವರ್ಷ ವಿಪಕ್ಷ ಉಪನಾಯಕ, ನಾಲ್ಕೂವರೆ ವರ್ಷ ಬಿಜೆಪಿ ರಾಜ್ಯಾಧ್ಯಕ್ಷ, ನರೇಂದ್ರ ಮೋದಿಯವರ ಸಚಿವ ಸಂಪುಟದ ಸದಸ್ಯನಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿರುವೆ ಎಂದರು.

ಈ ಹಿಂದೆ ರಾಜ್ಯದ ಕೆಲವು ಬಿಜೆಪಿ ಸಂಸದರಿಗೆ ಟಿಕೆಟ್‌ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆಗ, ಬೇಸರಗೊಂಡಿದ್ದ ಡಿವಿಎಸ್‌, 13 ಸಂಸದರ ತೇಜೋವಧೆ ಪ್ರಯತ್ನ ಮಾಡಲಾಗುತ್ತಿದೆ. ವಯಸ್ಸಾದ ಮತ್ತು ಅನಾರೋಗ್ಯ ಕಾರಣಕ್ಕಾಗಿ ಟಿಕೆಟ್‌ ಇಲ್ಲ ಎಂಬ ವರದಿಗಳು ಬರುತ್ತಿವೆ. ಈ ಬಗ್ಗೆ ಕೇಂದ್ರ ನಾಯಕರೇ ಮಧ್ಯ ಪ್ರ ವೇಶಿಸಬೇಕು ಎಂದು ಒತ್ತಾಯಿಸಿದ್ದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆಯೂ ಅವರು ಕೇಂದ್ರದ ವರಿಷ್ಠರ ತೀರ್ಮಾನವಾಗಿದ್ದು, ಇಲ್ಲಿನ ನಾಯ ಕರ ಮಾತನ್ನೂ ಕೇಳಬೇಕಿತ್ತು ಎಂದು ಹೇಳಿ ದ್ದರು. ಇತ್ತೀಚೆಗಷ್ಟೇ, ಹೊಸದಿಲ್ಲಿಗೆ ತೆರಳಿದ್ದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿ ಸಿಗದೇ ವಾಪಸ್‌ ಬಂದಿ ದ್ದರು.

Advertisement

Udayavani is now on Telegram. Click here to join our channel and stay updated with the latest news.

Next