Advertisement

ದೆಹಲಿ ಗಲಭೆ ಪ್ರಕರಣ:11 ಗಂಟೆ ವಿಚಾರಣೆ- ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಖಾಲಿದ್ ಬಂಧನ

12:20 PM Sep 14, 2020 | Nagendra Trasi |

ನವದೆಹಲಿ: ಫೆಬ್ರುವರಿ ತಿಂಗಳಿನಲ್ಲಿ ದೆಹಲಿಯಲ್ಲಿ ಹೊತ್ತಿಕೊಂಡಿದ್ದ ಗಲಭೆ ಈಶಾನ್ಯ ರಾಜ್ಯಗಳಿಗೂ ಹಬ್ಬಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ಹಳೇ ವಿದ್ಯಾರ್ಥಿ ಉಮರ್ ಖಾಲಿದ್ ನನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಬಂಧಿಸಿರುವುದಾಗಿ ಸೋಮವಾರ (ಸೆಪ್ಟೆಂಬರ್ 14, 2020) ವರದಿ ತಿಳಿಸಿದೆ.

Advertisement

ಗಲಭೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣದಲ್ಲಿ ಉಮರ್ ಖಾಲಿದ್ ವಿರುದ್ಧ ಅಪರಾಧ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ಖಾಲಿದ್ ಮೊಬೈಲ್ ಫೋನ್ ಅನ್ನು ಕೂಡಾ ವಶಪಡಿಸಿಕೊಳ್ಳಲಾಗಿತ್ತು ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

“ಸುಮಾರು 11 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕ ದೆಹಲಿ ವಿಶೇಷ ಪೊಲೀಸ್ ಪಡೆ ದೆಹಲಿ ಗಲಭೆ ಪ್ರಕರಣದ ಸಂಚಿನ ಆರೋಪದ ಮೇಲೆ ಉಮರ್ ಖಾಲಿದ್ ನನ್ನು ಬಂಧಿಸಿರುವುದಾಗಿ” ವರದಿ ವಿವರಿಸಿದೆ. ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆಯನ್ನು ಗಲಭೆಯನ್ನಾಗಿ ಪರಿವರ್ತಿಸಲಾಗಿತ್ತು ಎಂಬ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣದ ಆರೋಪಿ ಶಾರ್ಜಿಲ್ ಇಮಾಮ್ ಗೆ ಕೋವಿಡ್ 19 ದೃಢ

ಈಶಾನ್ಯ ದೆಹಲಿಯ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಒಂದು ವಾರದ ನಂತರ ಫೆಬ್ರುವರಿ 23ರಿಂದ 26ರವರೆಗೆ ಗಲಭೆಗೆ ತಿರುಗಿತ್ತು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಸುಮಾರು 50 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ಹಲವರು ಗುಂಡೇಟಿನ ಗಾಯದಿಂದ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.

Advertisement

ಉಮರ್ ಖಾಲಿದ್ ಬಂಧನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ದೆಹಲಿ ಗಲಭೆಯ ಆರೋಪಿ ಹೆಸರನ್ನು ಬಹಿರಂಗಗೊಳಿಸಿರುವುದಕ್ಕೆ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಮತ್ತು ಸ್ವರಾಜ್ ಅಭಿಯಾನ್ ಮುಖ್ಯಸ್ಥ ಯೋಗೇಂದ್ರ ಯಾದವ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್

ಅಷ್ಟೇ ಅಲ್ಲ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಲ್ಲಿಸಿದ್ದ ಹೆಚ್ಚುವರಿ ಆರೋಪಪಟ್ಟಿಯಲ್ಲಿನ ಹೆಸರನ್ನೂ ಬಹಿರಂಗಗೊಂಡಿತ್ತು. ಇದರಲ್ಲಿ ಆರ್ಥಿಕ ತಜ್ಞ ಜಯತಿ ಘೋಷ್, ದೆಹಲಿ ಯೂನಿರ್ವಸಿಟಿ ಪ್ರೊ. ಅಪುರ್ವಾನಂದ್ ಮತ್ತು ಸಾಕ್ಷ್ಯ ಚಿತ್ರ ನಿರ್ಮಾಪಕ ರಾಹುಲ್ ರಾಯ್ ಹೆಸರು ಆರೋಪಪಟ್ಟಿಯಲ್ಲಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next