Advertisement

ಒಲಿಂಪಿಯನ್‌, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್‌ ಹುಸೇನ್‌ ನಿಧನ

11:28 PM Apr 17, 2021 | Team Udayavani |

ಬೆಂಗಳೂರು: ಭಾರತದ ಮಾಜಿ ಫ‌ುಟ್ಬಾಲಿಗ, ಒಲಿಂಪಿಯನ್‌ ಖ್ಯಾತಿಯ ಅಹ್ಮದ್‌ ಹುಸೇನ್‌ ಬೆಂಗಳೂರಿನಲ್ಲಿ ನಿಧನ ಹೊಂದಿದರು. 89 ವರ್ಷದ ಹುಸೇನ್‌ ಅವರಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದಿತ್ತು.

Advertisement

1932ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಅಹ್ಮದ್‌ ಹುಸೇನ್‌ “ಹೈದರಾಬಾದ್‌ ಸಿಟಿ ಪೊಲೀಸ್‌’ ತಂಡದ ಪರ ಮೊದಲ ಸಲ ಫ‌ುಟ್‌ಬಾಲ್‌ ಆಡಿದ್ದರು. ಬಳಿಕ ಬೆಂಗಳೂರಿಗೆ ಬಂದು ನೆಲೆಸಿದರು. 1956ರ ಮೆಲ್ಬರ್ನ್ ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದಾಗಿದೆ. ಇಲ್ಲಿ ಆತಿಥೇಯ ಆಸ್ಟ್ರೇಲಿಯವನ್ನು 4-2 ಗೋಲುಗಳಿಂದ ಮಣಿಸಿದ ಭಾರತ 4ನೇ ಸ್ಥಾನಿಯಾಗಿತ್ತು.

ಹುಸೇನ್‌ 1951ರ ಹೊಸದಿಲ್ಲಿ ಏಶ್ಯಾಡ್‌ನ‌ಲ್ಲಿ ಬಂಗಾರ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ನಿವೃತ್ತಿ ಬಳಿಕ ಭಾರತದ ತಂಡದ ಕೋಚ್‌ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಇದನ್ನೂ ಓದಿ :ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 2.31 ಲಕ್ಷ ಮಂದಿಗೆ ಕೋವಿಡ್ ಲಸಿಕೆ : ಸಚಿವ ಕೆ. ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next