ಅಗರ್ತಲಾ: ಎಡಪಕ್ಷಗಳ ನಿರಂತರ 25 ವರ್ಷಗಳ ಆಡಳಿತಕ್ಕೆ ಬ್ರೇಕ್ ಹಾಕಿರುವ ಬಿಜೆಪಿ ಭರ್ಜರಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಧಿಕಾರ ಹಿಡಿದಿರುವ ಬಿಜೆಪಿ ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದಿರುವ ಬಿಪ್‌ಲಾಬ್ ದೇವ್ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವ ಎಲ್ಲಾ ಸಾಧ್ಯತೆಗಳಿವೆ.
ತ್ರಿಪುರ ಘಟಕದ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ, ಬುಡಕಟ್ಟು ಸಮುದಾಯಕ್ಕೆ ಸೇರಿರುವ 48 ರ ಹರೆಯದ ಬಿಪ್‌ಲಾಬ್ ದೇವ್ ಆರ್‌ಎಸ್‌ಎಸ್‌ನ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದು ಈ ಹಿಂದೆ ದೆಹಲಿಯಲ್ಲಿ ಜಿಮ್ ತರಬೇತುದಾರರಾಗಿಯೂ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ.
ಬಿಜೆಪಿ ಸಂಸದೀಯ ಮಂಡಳಿ ಇಂದು ಸಂಜೆ ಸಭೆ ಸೇರಲಿದ್ದು ಅಲ್ಲಿ ಬಿಪ್‌ಲಾಬ್ ಅವರ ಆಯ್ಕೆಯನ್ನು ಅಧಿಕೃತ ಮಾಡುವ ಸಾಧ್ಯತೆಗಳಿವೆ.
ಬಿಪ್‌ಲಾಬ್ ಕುಮಾರ್ ಅವರು ಮನೆ ಮನೆ ಪ್ರಚಾರ ಸೇರಿದಂತೆ ರಾಜ್ಯಾಧ್ಯಂತ ಜನರಿಗೆ ಮೋಡಿ ಮೂಲಕ ಮಾಡುವ ಬಿಜೆಪಿಗೆ ಭರ್ಜರಿ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಬುಡಕಟ್ಟು ಜನರೇ ಹೆಚ್ಚಿರುವ ತ್ರಿಪುರದಲ್ಲಿ ಕಳೆದ 25 ವರ್ಷಗಳಿಂದ ಬುಡಕಟ್ಟು ಜನಾಂಗಕ್ಕೆ ಸೇರಿದವರು ಮುಖ್ಯಮಂತ್ರಿ ಹುದ್ದೆಯಲ್ಲಿರಲ್ಲಿಲ್ಲ. ಬಿಪ್‌ಲಾಬ್ ಅವರ ನಾಯಕತ್ವ ಬುಡಕಟ್ಟು ಜನಾಂಗದವರ ಮತಗಳನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಪ್ರಮುಖ ಕೆಲಸ ಮಾಡಿದೆ.
ಬಿಜೆಪಿ ಪಾಳಯದಲ್ಲಿ ಇನ್ನೂ ಕೆಲವರ ಹೆಸರುಗಳು ಸಿಎಂ ಹುದ್ದೆಗೆ ಕೇಳಿ ಬರುತ್ತಿದ್ದು, ವಿಎಚ್‌ಪಿ ನಾಯಕರಾಗಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಮ್‌ಪಾದಾ ಜಮಾತಿಯಾ ಮತ್ತು ಆರ್‌ಎಸ್‌ಎಸ್‌ನ ಪ್ರಚಾರಕ್ ಡಾ.ಅತುಲ್ ದೇವ್‌ವರ್ಮಾ ಅವರ ಹೆಸರೂ ಪಟ್ಟಿಯಲ್ಲಿದೆ.
ತ್ರಿಪುರದಲ್ಲಿ 59 ಸ್ಥಾನಗಳ ಪೈಕಿ 43 ರಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ ಭಾರಿ ಜಯ ದಾಖಲಿಸಿದೆ.