Advertisement

ತೃಣಮೂಲ ಕಾಂಗ್ರೆಸ್‌ಗೆ ಬೈಚುಂಗ್‌ ಭುಟಿಯಾ ರಾಜೀನಾಮೆ

11:50 AM Feb 26, 2018 | udayavani editorial |

ಹೊಸದಿಲ್ಲಿ : ಭಾರತೀಯ ಫ‌ುಟ್ಬಾಲ್‌ ತಂಡದ ಮಾಜಿ ನಾಯಕ ಬೈಚುಂಗ್‌ ಭುಟಿಯಾ ಅವರು ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲಿ ತಾನು ಹೊಂದಿರುವ ಎಲ್ಲ ರಾಜಕೀಯ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 

Advertisement

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಕೂಡ ಭುಟಿಯಾ ಬಿಟ್ಟುಕೊಟ್ಟಿದ್ದಾರೆ.

ಟಿಎಂಸಿಗೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಭುಟಿಯಾ ಅವರು ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದಾರೆ.

ಉತ್ತರ ಬಂಆಲ ಕ್ರೀಡಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದ  ಭುಟಿಯಾಅವರು 2013ರಲ್ಲಿ ಟಿಎಂಸಿ ಸೇರಿಕೊಂಡಿದ್ದರು. ಅವರು ಟಿಎಂಸಿ ಟಿಕೆಟ್‌ನಲ್ಲಿ ರಾಜ್ಯ ವಿಧಾನಸಭೆಗೆ ಮತ್ತು ಸಂಸತ್ತಿಗೆ ಸ್ಪರ್ಧಿಸಿ ಸೋತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next